ಪ್ಯಾರಿಸ್: ವಿಶ್ವ ಪಾರಂಪಾರಿಕ ಕೇಂದ್ರ (World Heritage Centre)ದ ವೆಬ್ಸೈಟ್ನಲ್ಲಿ ಭಾರತದ ಪಾರಂಪಾರಿಕ ತಾಣಗಳ ಬಗ್ಗೆ ಹಿಂದಿಯಲ್ಲಿ ವಿವರಣೆಯನ್ನು ಬರೆಯಲು ಒಪ್ಪಿಕೊಂಡಿರುವುದಾಗಿ ಯುನೆಸ್ಕೋ ವಿಶ್ವ ಪಾರಂಪಾರಿಕ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ. ಜನವರಿ 10 ರಂದು ವಿಶ್ವ ಹಿಂದಿ ದಿನದ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ.
ವಿಶ್ವ ಪಾರಂಪಾರಿಕ ಕೇಂದ್ರವು ಭಾರತದ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಹಿಂದಿ ವಿವರಣೆಯನ್ನು WHC ನಲ್ಲಿ ಪ್ರಕಟಿಸಲು ಒಪ್ಪಿಕೊಂಡಿದೆ ಎಂದು ಯುನೆಸ್ಕೋಗೆ ಭಾರತದ ಖಾಯಂ ನಿಯೋಗಕ್ಕೆ ಮಾಹಿತಿಯನ್ನು ತಿಳಿಸಲಾಗಿದೆ.
ಯುನೆಸ್ಕೋಗೆ ಭಾರತದ ಖಾಯಂ ನಿಯೋಗವು ಜನವರಿ 10 ರಂದು ವಿಶ್ವ ಹಿಂದಿ ದಿನದ ವರ್ಚುವಲ್ ಆಚರಣೆಯನ್ನು ಆಯೋಜಿಸಿತ್ತು. ಇದರಲ್ಲಿ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ವಿಶ್ವ ಹಿಂದಿ ದಿನದಂದು ವೀಡಿಯೊ ಸಂದೇಶವನ್ನು ನೀಡಿದರು ಮತ್ತು ಹಿಂದಿಯ ಮಹತ್ವವನ್ನು ಒತ್ತಿ ಹೇಳಿದರು.
UNESCO ಗೆ ಭಾರತದ ರಾಯಭಾರಿ/ಖಾಯಂ ಪ್ರತಿನಿಧಿ ವಿಶಾಲ್ ವಿ. ಶರ್ಮಾ ಅವರು ಭಾರತದ ಸ್ವಾತಂತ್ರ್ಯದ ಕಳೆದ 75 ವರ್ಷಗಳಲ್ಲಿ ಹಿಂದಿ ಸಾಧಿಸಿದ ಪ್ರಮುಖ ಅಂಶಗಳನ್ನು ಸಹ ಎತ್ತಿ ತೋರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.