ನವದೆಹಲಿ: ಶೀಘ್ರದಲ್ಲೇ ಇ- ಪಾಸ್ಪೋರ್ಟ್ ಸೇವೆಯನ್ನು ಆರಂಭಿಸಲು ಕೇಂದ್ರ ಸರಕಾರ ಸಿದ್ಧವಾಗಿದೆ. ಡಿಜಿಟಲ್ ಯುಗದಲ್ಲಿ ಅತ್ಯಂತ ಅನುಕೂಲಕರವಾದ ಸೇವೆ ಇದಾಗಲಿದೆ. ಈ ಸೇವೆ ಜಾರಿಯಾದ ಬಳಿಕ ಭಾರತೀಯ ಪ್ರಜೆಗಳು ಭೌತಿಕ ಪಾಸ್ಪೋರ್ಟ್ ಅನ್ನು ತಮ್ಮ ಜೊತೆ ಒಯ್ಯಬೇಕಾದ ಅಗತ್ಯತೆ ಬೀಳುವುದಿಲ್ಲ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಭಟ್ಟಾಚಾರ್ಯ ಇತ್ತೀಚಿಗೆ ಟ್ವೀಟ್ ಮಾಡಿ ಇ- ಪಾಸ್ಪೋರ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಇ- ಪಾಸ್ಪೋರ್ಟ್ ಸುರಕ್ಷಿತವಾಗಿರುತ್ತದೆ ಮತ್ತು ಕಳೆದುಹೋಗುವ ಭೀತಿ ಇಲ್ಲ. ಸಾಂಪ್ರದಾಯಿಕ ಪಾಸ್ಪೋರ್ಟ್ಗಿಂತ ಇದು ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಭಾರತೀಯ ಪಾಸ್ಪೋರ್ಟ್ ಅನ್ನು ಕಿರು ಪುಸ್ತಕದ ರೂಪದಲ್ಲಿ ನೀಡಲಾಗುತ್ತದೆ. ಇ- ಪಾಸ್ಪೋರ್ಟ್ಗಳು ಬಯೋಮೆಟ್ರಿಕ್ ದತ್ತಾಂಶದಿಂದ ಸುರಕ್ಷಿತವಾಗಿರುತ್ತವೆ ಹಾಗೂ ಜಾಗತಿಕ ವಲಸೆ ಅಗತ್ಯತೆಯನ್ನು ಪೂರೈಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇ- ಪಾಸ್ಪೋರ್ಟ್ ವಂಚನೆ ಮತ್ತು ಪ್ರಯಾಣಿಕರ ವಲಸೆಯ ವರ್ಧನೆಯನ್ನು ಇಲ್ಲಿಗೆ ಮಾಡಲಿದೆ ಎಂದು ಸರಕಾರ ಅಭಿಪ್ರಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.