ನವದೆಹಲಿ: ಭಯೋತ್ಪಾದನ ಕೃತ್ಯದಲ್ಲಿ ಭಾಗವಹಿಸಿದವರನ್ನು ಹೊರತುಪಡಿಸಿ ಉಳಿದ ಅಪರಾಧಿಗಳ ಮರಣದಂಡನೆಯನ್ನು ರದ್ದುಪಡಿಸಬೇಕು ಎಂದು ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಮರಣದಂಡನೆಯ ಶಿಕ್ಷೆಯ ಬಗ್ಗೆ ಚರ್ಚೆ ನಡೆಸಬೇಕಾಗಿದೆ, ಸ್ವಯಂ ನಿಯಂತ್ರಣ ಮತ್ತು ಮಸೂದೆಯ ಮೂಲಕ ಕೂಡಲೇ ಈ ಶಿಕ್ಷೆಯನ್ನು ಸರ್ಕಾರ ರದ್ದುಪಡಿಸಬೇಕಾಗಿದೆ ಎಂದು ನ್ಯಾ. ಅಜಿತ್ ಪ್ರಕಾಶ್ ಷಾ ನೇತೃತ್ವದ ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ.
ಮರಣದಂಡನೆ ವಿಧಿಸುವ ಸಂದರ್ಭ ವ್ಯಾಖ್ಯಾನಿಸಲಾಗುವ ಅಪರೂಪದಲ್ಲೇ ಅಪರೂಪದ ಪ್ರಕರಣ ಎಂಬುದಕ್ಕೆ ಸಮವಿಧಾನದಲ್ಲಿ ಯಾವುದೇ ಆಧಾರವಿಲ್ಲ. ಅಪರಾಧ ಸಂತ್ರಸ್ಥರಿಗೆ ನ್ಯಾಯ ಒದಗಿಸುವುದಕ್ಕಾಗಿ ಅಪರಾಧಿಗೆ ಮರಣದಂಡನೆ ನೀಡುವುದು ಒಂದೇ ಮಾರ್ಗ ಎಂಬ ಮನಸ್ಥಿತಿಯಿಂದಾಗಿ ಅಪರಾಧಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಮರೆಯಾಗಿದೆ ಎಂದು ಸಮಿತಿ ಅಭಿಪ್ರಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.