ಮುಂಬಯಿ: “ಅನಾಥರ ತಾಯಿ” ಎಂದೇ ಜನಪ್ರಿಯರಾಗಿದ್ದ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಸಿಂಧುತಾಯಿ ಸಪ್ಕಲ್ ಅವರು ಮಂಗಳವಾರ ಹೃದಯಾಘಾತದಿಂದ ಪುಣೆಯ ಆಸ್ಪತ್ರೆಯಲ್ಲಿ ನಿಧನರಾದರು. ಆಕೆಗೆ 75 ವರ್ಷ.
ಸಿಂಧುತಾಯಿ ಸಪ್ಕಾಲ್ ಅವರು ದಶಕಗಳಿಂದ ಮಾಡಿದ ಅನಾಥರ ಸೇವೆಗಾಗಿ ಕಳೆದ ವರ್ಷ ಪದ್ಮಶ್ರೀ ಪುರಸ್ಕಾರ ಪಡೆದಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಕೇಂದ್ರ ಸಚಿವರು ಮತ್ತು ವಿವಿಧ ಪಕ್ಷಗಳ ಮುಖಂಡರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅವರು ಸಪ್ಕಲ್ ಅವರ ಜೀವನವು “ಧೈರ್ಯ, ಸಮರ್ಪಣೆ ಮತ್ತು ಸೇವೆಯ ಸ್ಪೂರ್ತಿದಾಯಕ ಸಾಹಸ” ಎಂದು ಬಣ್ಣಿಸಿದ್ದಾರೆ.
“ಡಾ. ಸಿಂಧುತಾಯಿ ಸಪ್ಕಲ್ ಅವರ ಜೀವನವು ಧೈರ್ಯ, ಸಮರ್ಪಣೆ ಮತ್ತು ಸೇವೆಯ ಸ್ಪೂರ್ತಿದಾಯಕ ಸಾಹಸವಾಗಿದೆ. ಅವರು ಅನಾಥರು, ಬುಡಕಟ್ಟು ಜನರು ಮತ್ತು ಹಿಂದುಳಿದ ಜನರನ್ನು ಪ್ರೀತಿಸುತ್ತಿದ್ದರು ಮತ್ತು ಅವರಿಗಾಗಿ ಸೇವೆ ಸಲ್ಲಿಸಿದರು. 2021 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಅವರು ಅಸಮಾನ್ಯ ಸಾಹಸ ಕಥೆಯನ್ನು ಬರೆದಿದ್ದಾರೆ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ಸಂತಾಪ” ಎಂದಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿ, “ಡಾ. ಸಿಂಧುತಾಯಿ ಸಪ್ಕಲ್ ಅವರು ಸಮಾಜಕ್ಕೆ ಮಾಡಿದ ಉದಾತ್ತ ಸೇವೆಗಾಗಿ ಸ್ಮರಣೀಯರು. ಅವರ ಪ್ರಯತ್ನದಿಂದಾಗಿ, ಅನೇಕ ಮಕ್ಕಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸುತ್ತಿದ್ದಾರೆ. ಅವರು ಹಿಂದುಳಿದ ಸಮುದಾಯಗಳಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆಕೆಯ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದಿದ್ದಾರೆ.
Dr. Sindhutai Sapkal will be remembered for her noble service to society. Due to her efforts, many children could lead a better quality of life. She also did a lot of work among marginalised communities. Pained by her demise. Condolences to her family and admirers. Om Shanti. pic.twitter.com/nPhMtKOeZ4
— Narendra Modi (@narendramodi) January 4, 2022
The life of Dr Sindhutai Sapkal was an inspiring saga of courage, dedication and service. She loved & served orphaned, tribals and marginalised people. Conferred with Padma Shri in 2021, she scripted her own story with incredible grit. Condolences to her family and followers. pic.twitter.com/vGgIHDl1Xe
— President of India (@rashtrapatibhvn) January 4, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.