ಕೇಪ್ಟೌನ್: ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆಯುವ ಕ್ರಿಕೆಟ್ ಸರಣಿಗೆ ವಿಶ್ವ ಕಂಡ ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಹೆಸರಿನಲ್ಲಿಡಲು ನಿರ್ಧರಿಸಲಾಗಿದೆ.
ನವೆಂಬರ್ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಾವಳಿಗೆ ’ದಿ ಮಹಾತ್ಮಗಾಂಧಿ -ನೆಲ್ಸನ್ ಮಂಡೇಲಾ ಸಿರೀಸ್ ’ ಎಂದು ಹೆಸರಿಡಲಾಗುತ್ತಿದೆ.
ಈ ಎರಡು ದೇಶಗಳ ಜನರಿಗೆ ಗಾಂಧಿ ಮತ್ತು ಮಂಡೇಲಾರ ಸಿದ್ಧಾಂತಗಳನ್ನು ಎತ್ತಿ ಹಿಡಿಯುವುದಕ್ಕಿಂತ ಮಹತ್ತರವಾದ ಕರ್ತವ್ಯ ಬೇರೊಂದಿಲ್ಲ. ಕ್ರಿಕೆಟನ್ನು ಪ್ರೀತಿಸುವ ಜನರಾಗಿರುವ ನಾವು ಮೈದಾನದಲ್ಲಿ ಗೆಲ್ಲುವುದಕ್ಕಾಗಿ ಆಡಬೇಕು ಆದರೆ ಈ ಇಬ್ಬರು ನಾಯಕರ ಸ್ಫೂರ್ತಿಯೊಂದಿಗೆ ಆಡುವುದನ್ನು ಮರೆಯಬಾರದು’ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಹಾರೂನ್ ಲಾರ್ಗಟ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.