ಬೆಂಗಳೂರು : ಪ್ರಧಾನಿ ಮೋದಿ ಅವರಿಂದು ಬಿಡುಗಡೆ ಮಾಡಿರುವ ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ 14 ಕೋಟಿ ಈಕ್ವಿಟಿ ಅನುದಾನದಲ್ಲಿ ಕರ್ನಾಟಕದ ಒಟ್ಟು 30 ಎಫ್ಪಿಓಗಳ ಒಟ್ಟು 12047 ಸದಸ್ಯರಿಗೆ 1 ಕೋಟಿ 21 ಲಕ್ಷದ 42 ಸಾವಿರ ರೂ. ಅನುದಾನ ಬಿಡುಗಡೆಯಾಗಿದೆ.
ಈ 1,21,42000 ರೂ. ಅನುದಾನದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಎಫ್ಪಿಓಗಳಿಗೆ 57 ಲಕ್ಷದ 74 ಸಾವಿರ ರೂ., ನಬಾರ್ಡ್ನ 11 ಎಫ್ಪಿಓಗಳಿಗೆ 43 ಲಕ್ಷದ 69ಸಾವಿರ ರೂ., ಎಸ್ಎಫ್ಎಸಿಯ 6 ಎಫ್ಪಿಓಗಳಿಗೆ 19 ಲಕ್ಷದ 19 ಸಾವಿರ ರೂ. ಇಕ್ವಿಟಿ ಗ್ರ್ಯಾಂಟಾಗಿದೆ.
ರೈತ ಉತ್ಪಾದಕರ ಸಂಸ್ಥೆ ಈಕ್ವಿಟಿ ಅನುದಾನ ಬಿಡುಗಡೆ ಕಾರ್ಯಕ್ರಮ ಭಾರತ ಸರ್ಕಾರದ 2020-21 ನೇ ಸಾಲಿನ ಆಯವ್ಯಯದಲ್ಲಿ Formation and Promotion of 10,000 Farmer Producer Organizations ಎಂದು ಘೋಷಿಸಲಾಗಿರುತ್ತದೆ.ರಾಜ್ಯಕ್ಕೆ ವಿವಿಧ ಅನುಷ್ಠಾನ ಸಂಸ್ಥೆಗಳಿಂದ 185 ರೈತ ಉತ್ಪಾದಕರ ಸಂಸ್ಥೆ ( ಜಲಾನಯನ ಅಭಿವೃದ್ಧಿ ಇಲಾಖೆ -100, SFAC – 25, NABARD – 37 ಮತ್ತು NCDC – 23 ) ಗಳನ್ನು ರಚಿಸಲು ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ಗುರಿಯನ್ನು ನೀಡಲಾಗಿದೆ.ಅಲ್ಲದೇ ಯೋಜನೆಯಡಿ ಇಲ್ಲಿಯವರೆಗೂ ಒಟ್ಟಾರೆ 152 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದ್ದು, ಜಲಾನಯನ ಅಭಿವೃದ್ಧಿ ಇಲಾಖೆ -99 SFAC – 21 , NABARD – 313 ) NCDC – 1 ಎಫ್ಪಿಓ ಆಗಿವೆ.
ರೈತ ಉತ್ಪಾದಕರ ಸಂಸ್ಥೆಗಳಿಗೆ ಸಂಗ್ರಹಿಸಲಾದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ರೂ .15 ಲಕ್ಷಗಳ ವರೆಗೆ ಮ್ಯಾಚಿಂಗ್ ಅನುದಾನವಾಗಿ ಇಕ್ವಿಟಿ ಗ್ರ್ಯಾಂಟ್ ನೀಡಲಾಗುತ್ತಿದೆ. ಈ ರೂ. 15 ಲಕ್ಷ ಇಕ್ವಿಟಿ ಗ್ರ್ಯಾಂಟ್ಗಳನ್ನು ಗರಿಷ್ಠ ಮೂರು ಹಂತಗಳಲ್ಲಿ ನೀಡಲಾಗುವುದು.
ಇದರಿಂದ ರೈತ ಉತ್ಪಾದಕರ ಸಂಸ್ಥೆಗಳ ಬಂಡವಾಳ ನಿಧಿ ಹೆಚ್ಚಾಗಿ ಇದು ವ್ಯವಹಾರ ಅಭಿವೃದ್ಧಿಗೆ ನೆರವಾಗುತ್ತದೆ.
ಇನ್ನು ರೈತ ಉತ್ಪಾದಕರ ಸಂಸ್ಥೆಗಳು ಪಡೆದ ಇಕ್ವಿಟಿ ಗ್ರ್ಯಾಂಟ್ ಅನುದಾನದಲ್ಲಿ ಸದಸ್ಯರುಗಳಿಂದ ಸಂಗ್ರಹಿಸಿದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ರೂ. 2000 ವರೆಗೆ ಸೀಮಿತಗೊಳಿಸಿ ಷೇರುಗಳನ್ನು ನೀಡಲಾಗುವುದು. ಮೊದಲ ಹಂತದಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ 30 ರೈತ ಉತ್ಪಾದಕರ ಸಂಸ್ಥೆಗಳ 12047 ಸದಸ್ಯರುಗಳಿಗೆ 1 ಕೋಟಿ 21 ಲಕ್ಷದ 42 ಸಾವಿರ ರೂ. ಅನುದಾನವನ್ನು ಪ್ರಧಾನಿ ಮೋದಿ ಇಂದು ಬಿಡುಗಡೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.