ನವದೆಹಲಿ: ಡಿಸೆಂಬರ್ 2021 ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಆದಾಯವು 1,29,780 ಕೋಟಿ ರೂ.ಗಳಾಗಿದ್ದು, ಇದರಲ್ಲಿ CGST 22,578 ಕೋಟಿ ರೂ, SGST 28,658 ಕೋಟಿ ರೂ, IGST 69,155 ಕೋಟಿ ರೂ ಮತ್ತು ಸೆಸ್ 9,389 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ 614 ಕೋಟಿ ಸೇರಿದಂತೆ) ಎಂದು ಶನಿವಾರ ಅಧಿಕೃತ ಪ್ರಕಟಣೆ ತಿಳಿಸಿದೆ.
ಸರ್ಕಾರವು 25,568 ಕೋಟಿಯನ್ನು ಸಿಜಿಎಸ್ಟಿಗೆ ಮತ್ತು ರೂ 21,102 ಕೋಟಿಯನ್ನು ಎಸ್ಜಿಎಸ್ಟಿಗೆ ಐಜಿಎಸ್ಟಿಯಿಂದ ರೆಗ್ಯುಲರ್ ಸೆಟಲ್ಮೆಂಟ್ ಆಗಿ ಇತ್ಯರ್ಥಪಡಿಸಿದೆ.
ಇತ್ಯರ್ಥದ ನಂತರ ಡಿಸೆಂಬರ್ 2021 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ಟಿಗೆ ರೂ 48,146 ಕೋಟಿ ಮತ್ತು ಎಸ್ಜಿಎಸ್ಟಿಗೆ ರೂ 49,760 ಕೋಟಿಯಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಡಿಸೆಂಬರ್ 2021 ರ ಆದಾಯವು ಕಳೆದ ವರ್ಷದ ಅದೇ ತಿಂಗಳ GST ಆದಾಯಕ್ಕಿಂತ 13 ಶೇಕಡಾ ಹೆಚ್ಚಾಗಿದೆ ಮತ್ತು ಡಿಸೆಂಬರ್ 2019 ರಲ್ಲಿ GST ಆದಾಯಕ್ಕಿಂತ 26 ಶೇಕಡಾ ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.