ನವದೆಹಲಿ: ಜಾಗತಿಕವಾಗಿ ಕೊರೋನಾವೈರಸ್ ಪ್ರಕರಣಗಳಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಯುಎಸ್ ಮತ್ತು ಫ್ರಾನ್ಸ್ನಲ್ಲಿ ದಾಖಲೆಯ ಏರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಓಮಿಕ್ರಾನ್ ಪ್ರಕರಣಗಳು ಸುನಾಮಿ ರೀತಿ ಅಪ್ಪಳಿಸಲಿದೆ ಎಂದು ಎಚ್ಚರಿಕೆ ನೀಡಿದ ಎನ್ನಲ್ಲೇ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಏರುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೆಬ್ರಿಯಾಸಿಸ್ ಅವರು ವಿಶ್ವದಾದ್ಯಂತ ಕೋವಿಡ್ -1 ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕೊರೊನವೈರಸ್ ರೂಪಾಂತರಗಳಾದ ಓಮಿಕ್ರಾನ್ ಮತ್ತು ಡೆಲ್ಟಾ ಪ್ರಕರಣಗಳ ಸುನಾಮಿ ಏಳಲಿದೆ ಎಂದಿದ್ದಾರೆ.
ಯುಎಸ್ ಲಸಿಕೆ ಹೊರತಂದು ಒಂದು ವರ್ಷವಾಗಿದೆ. ಆದರೂ ಕೋವಿಡ್ -19 ರ ಹೊಸ ಪ್ರಕರಣಗಳು ದಿನಕ್ಕೆ 265,000 ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿವೆ, ಓಮಿಕ್ರಾನ್ ರೂಪಾಂತರದ ಪ್ರಕರಣಗಳು ಅಲ್ಲಿ ಹೆಚ್ಚಿವೆ. ದಿನಕ್ಕೆ ಹೊಸ ಪ್ರಕರಣಗಳು ಕಳೆದ ಎರಡು ವಾರಗಳಲ್ಲಿ ದ್ವಿಗುಣಗೊಂಡಿವೆ.
ಭಾರತದಲ್ಲೂ ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು 9,195 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಸಕ್ರಿಯ ಪ್ರಕರಣ 77,002 ಕ್ಕೆ ಏರಿಕೆಯಾಗಿದೆ.
ಬುಧವಾರ ರಾತ್ರಿಯ ಅಧಿಕೃತ ಡೇಟಾದ ಪ್ರಕಾರ, ಭಾರತದ ಓಮಿಕ್ರಾನ್ ಸಂಖ್ಯೆ 950 ರ ಸಮೀಪದಲ್ಲಿದೆ. ಗುಜರಾತ್, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಹೊಸ ರೂಪಾಂತರದ ಹೊಸ ಪ್ರಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಖಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.