ನವದೆಹಲಿ: ಭಾರತವು ಮುಂದಿನ ವರ್ಷ ಫ್ರಾನ್ಸ್ ಮತ್ತು 2023 ರಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಮರಳಿ ಪಡೆಯಲಿದೆ ಎಂದು ಬ್ರಿಟಿಷ್ ಕನ್ಸಲ್ಟೆನ್ಸಿ CEBR ಹೇಳಿದೆ.
ಬ್ರಿಟಿಷ್ ಕನ್ಸಲ್ಟೆನ್ಸಿ CEBR ಬಿಡುಗಡೆ ಮಾಡಿದ ವರದಿಯ ಪ್ರಕಾರ, ಮುಂದಿನ ವರ್ಷ ಮೊದಲ ಬಾರಿಗೆ ವಿಶ್ವದ ಆರ್ಥಿಕ ಉತ್ಪಾದನೆಯು 100 ಟ್ರಿಲಿಯನ್ ಡಾಲರ್ಗಳನ್ನು ಮೀರಲಿದೆ. ಅಲ್ಲದೇ, ಅಮೆರಿಕಾವನ್ನು ಹಿಂದಿಕ್ಕಿ ನಂ.1 ಆರ್ಥಿಕತೆಯಾಗುವ ಚೀನಾದ ಯೋಜನೆ ಹಿಂದೆ ಯೋಜಿಸಿದ್ದಕ್ಕಿಂತ ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ಅದು ಹೇಳಿದೆ.
ಕಳೆದ ವರ್ಷದ ವರ್ಲ್ಡ್ ಎಕನಾಮಿಕ್ ಲೀಗ್ ಟೇಬಲ್ ವರದಿಯಲ್ಲಿನ ಉಲ್ಲೇಖಕ್ಕಿಂತ ಎರಡು ವರ್ಷಗಳ ನಂತರ ಅಂದರೆ 2030 ರಲ್ಲಿ ಚೀನಾವು ಡಾಲರ್ ಲೆಕ್ಕದಲ್ಲಿ ವಿಶ್ವದ ಅಗ್ರ ಆರ್ಥಿಕತೆಯಾಗಲಿದೆ ಎಂದು CEBR ಭವಿಷ್ಯ ನುಡಿದಿದೆ.
2033 ರಲ್ಲಿ ಜರ್ಮನಿಯು ಆರ್ಥಿಕ ಉತ್ಪಾದನೆಯಲ್ಲಿ ಜಪಾನ್ ಅನ್ನು ಹಿಂದಿಕ್ಕುವ ಹಾದಿಯಲ್ಲಿದೆ ಎಂದು ವರದಿ ತೋರಿಸಿದೆ. ರಷ್ಯಾ 2036 ರ ವೇಳೆಗೆ ಟಾಪ್ 10 ಆರ್ಥಿಕತೆಯಾಗಬಹುದು ಮತ್ತು ಇಂಡೋನೇಷ್ಯಾ 2034 ರಲ್ಲಿ ಒಂಬತ್ತನೇ ಸ್ಥಾನ ಪಡೆಯುವ ಹಾದಿಯಲ್ಲಿದೆ ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.