ನವದೆಹಲಿ: ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಅವರು ಭಾನುವಾರ ಗಾಜಿಯಾಬಾದ್ನ ನ್ಯಾಷನಲ್ ಟೆಸ್ಟ್ ಹೌಸ್ (ಎನ್ಟಿಎಚ್) ನಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ಪರೀಕ್ಷಾ ಸೌಲಭ್ಯವನ್ನು ಉದ್ಘಾಟಿಸಿದರು.
ಈ ವೇಳೆ ಎನ್ಟಿಎಚ್ನ ಹಿರಿಯ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಣಮಟ್ಟದ ಮೌಲ್ಯಮಾಪನ ಮತ್ತು ಭರವಸೆಯನ್ನು ನೀಡಲು ತಂತ್ರಜ್ಞಾನವನ್ನು ಉನ್ನತೀಕರಿಸುತ್ತಿರುವ ಎನ್ಟಿಎಚ್ ಕಾರ್ಯವನ್ನು ಶ್ಲಾಘಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತವು ತನ್ನ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಬೇಕಾದರೆ, ಗುಣಮಟ್ಟ, ನಿಯಂತ್ರಣ, ಗುಣಮಟ್ಟದ ಮೌಲ್ಯಮಾಪನ ಮತ್ತು ಗುಣಮಟ್ಟದ ಭರವಸೆ ವಿಶ್ವ ದರ್ಜೆಗಿಂತ ಕಡಿಮೆಯಿರಬಾರದು ಎಂದು ಅವರು ಪ್ರತಿಪಾದಿಸಿದರು.
“ನಾವು ಭಾರತವನ್ನು ನಿಜವಾಗಿಯೂ ಜಾಗತಿಕ ಶಕ್ತಿಯನ್ನಾಗಿ ಮಾಡಬೇಕಾದರೆ, ನಾವು ನಮ್ಮ ಶಕ್ತಿ, ನಮ್ಮ ಸಾಮರ್ಥ್ಯಗಳನ್ನು ಜಗತ್ತಿಗೆ ತೋರಿಸಬೇಕಾದರೆ, ನಾವು ಪರಸ್ಪರ ಗುರುತಿಸುವ ಒಪ್ಪಂದಗಳನ್ನು ಮಾಡಬೇಕಾದರೆ, ನಮ್ಮ ಪ್ರಯೋಗಾಲಯ ಪರೀಕ್ಷಾ ಸೌಲಭ್ಯಗಳಲ್ಲಿ ನಾವು ವಿಶ್ವ ದರ್ಜೆಯವರಾಗಿರಬೇಕು, ನಮ್ಮ ಜನರು ಉತ್ತಮವಾಗಿ ತರಬೇತಿ ಪಡೆಯಬೇಕು, ನಮ್ಮ ಉಪಕರಣಗಳು ಜಗತ್ತಿನಲ್ಲಿ ಲಭ್ಯವಿರುವ ಅತ್ಯುತ್ತಮವಾಗಿರಬೇಕ ”ಎಂದು ಅವರು ಹೇಳಿದರು.
ಅಲ್ಟ್ರಾ ಹೈ-ಪರ್ಫಾರ್ಮೆನ್ಸ್ ಲಿಕ್ವಿಡ್ ಕ್ರೊಮ್ಯಾಟೋಗ್ರಾಫ್ (UHPLC) ಮತ್ತು ಐಯಾನ್ ಕ್ರೊಮ್ಯಾಟೋಗ್ರಾಫ್ (IC) ಎಂಬ ಎರಡು ಉಪಕರಣಗಳನ್ನು ಇಲ್ಲಿ ಉದ್ಘಾಟನೆ ಮಾಡಲಾಗಿದ್ದು, ನೀರಿಗಾಗಿ ಸಮಗ್ರ ಗುಣಮಟ್ಟದ ಪರೀಕ್ಷಾ ಸೌಲಭ್ಯವನ್ನು ಇದು ಒಳಗೊಂಡಿದೆ. UHPLC ವಿವಿಧ ಸಾವಯವ ಸಂಯುಕ್ತಗಳನ್ನು ವಿಶೇಷವಾಗಿ ಕುಡಿಯುವ ನೀರಿನ ಮಾದರಿಗಳಲ್ಲಿ ಉಳಿದಿರುವ ಕೀಟನಾಶಕಗಳ ಪ್ರಮಾಣೀಕರಣಕ್ಕೆ ಸಹಾಯಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.