ಭೋಪಾಲ್: ಮೊಘಲರ ಕಾಲದ ನಾಣ್ಯಗಳು ತುಂಬಿದ ಎರಡು ಮಣ್ಣಿನ ಮಡಕೆಗಳನ್ನು ಕದ್ದ 12 ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಮಧ್ಯಪ್ರದೇಶದ ಜೇಲ್ಘಾಟ್ನಲ್ಲಿ ನಡೆದಿದೆ.
ಮಂಡ್ಲಾ ಮತ್ತು ಜೇಲ್ಘಾಟ್ ಪ್ರದೇಶದಲ್ಲಿ ಪೈಪ್ಲೈನ್ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ಕಾರ್ಮಿಕರಿಗೆ ನಾಣ್ಯಗಳು ತುಂಬಿದ್ದ ಎರಡು ಮಣ್ಣಿನ ಮಡಕೆಗಳು ಸಿಕ್ಕಿವೆ. ಇದನ್ನು ಅವರು ತಮ್ಮ ಊರಾದ ಪಾಂಡಿವಾರ ಹಳ್ಳಿಗೆ ಕೊಂಡೊಯ್ಯಿದಿದ್ದಾರೆ.
ನಾಣ್ಯದ ಮಡಕೆ ಸಿಕ್ಕ ಬಗ್ಗೆ ಮಾಹಿತಿ ಪಡೆದ ಪೊಲೀಸರು ರೈಡ್ ಮಾಡಿ ಈ ಕಾರ್ಮಿಕರನ್ನು ನಾಣ್ಯಗಳ ಸಮೇತ ಬಂಧಿಸಿದ್ದಾರೆ. ಇದರಲ್ಲಿ 596 ನಾಣ್ಯಗಳು ದೊರೆತಿವೆ. ಇನ್ನಷ್ಟು ನಾಣ್ಯಗಳು ಇರಬಹುದೆಂಬ ಶಂಕೆಯ ಮೇರೆಗೆ ತನಿಖೆ ನಡೆಸಲಾಗುತ್ತಿದೆ.
ಮೊಘಲರ ಕಾಲ ನಾಣ್ಯ ಇದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಲಿದ್ದಾರೆ.
ವಿವಿಧ ಕಾಯ್ದೆಗಳಡಿ ಕಾರ್ಮಿಕರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.