ಥಿಂಪು: ಭೂತಾನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಡಗ್ ಪೆಲ್ ಗಿ ಖೋರ್ಲೊ ನೀಡಿ ಗೌರವಿಸಿದೆ.
ಟ್ವಿಟರ್ನಲ್ಲಿ ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಾಡಾಗ್ ಪೆಲ್ ಗಿ ಖೋರ್ಲೋಗಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಘೋಷಣೆ ಮಾಡಿರುವುದು ತುಂಬಾ ಸಂತೋಷವಾಗಿದೆ” ಎಂದು ಹೇಳಿದ್ದಾರೆ.
Overjoyed to hear His Majesty pronounce Your Excellency Modiji’s @narendramodi name for the highest civilian decoration, Order of the Druk Gyalpo.https://t.co/hD3mihCtSv@PMOIndia @Indiainbhutan pic.twitter.com/ru69MpDWlq
— PM Bhutan (@PMBhutan) December 17, 2021
ಫೇಸ್ಬುಕ್ ಪೋಸ್ಟ್ ಮಾಡಿ “ವರ್ಷಗಳಿಂದ ಮತ್ತು ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಮೋದಿ ಅವರು ಬೇಷರತ್ತಾದ ಸ್ನೇಹ ಮತ್ತು ಬೆಂಬಲವನ್ನು ನೀಡಿದ್ದಾರೆ. ಈ ಗೌರವಕ್ಕೆ ಅವರು ಹೆಚ್ಚು ಅರ್ಹರು! ಭೂತಾನ್ನ ಜನರಿಂದ ಅಭಿನಂದನೆಗಳು” ಎಂದಿದ್ದಾರೆ.
ಎಲ್ಲಾ ಸಂವಾದಗಳಲ್ಲಿ ನಿಮ್ಮ ಶ್ರೇಷ್ಠತೆಯನ್ನು ನಾನು ಕಂಡಿದ್ದೇನೆ, ಮೋದಿ ಆಧ್ಯಾತ್ಮಿಕ ಮಾನವ. ವೈಯಕ್ತಿಕವಾಗಿ ಈ ಗೌರವವನ್ನು ಸಂಭ್ರಮಿಸಲು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಈಗಾಗಲೇ ಮೋದಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ಅವರು ಮುಡಿಗೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.