ನವದೆಹಲಿ: ಕೋಲ್ಕತ್ತಾದಲ್ಲಿ ಪ್ರತಿ ವರ್ಷ ಅಚರಿಸಲಾಗುವ ದುರ್ಗಾ ಪೂಜೆಯನ್ನು ಯುನೆಸ್ಕೋವು ಅಮೂರ್ತ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಯುನೆಸ್ಕೋ, “ಅಭಿನಂದನೆಗಳು ಭಾರತ” ಎಂದಿದೆ. ಅದರ ಜೊತೆಗೆ ದೇವಿಯ ವಿಗ್ರಹವನ್ನು ಲಗತ್ತಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಪಾರಂಪರಿಕ ಆಯೋಗದ ಅಧ್ಯಕ್ಷ ಸುವಪ್ರಸನ್ನ, ದುರ್ಗಾ ಪೂಜೆಯ ಮಂಟಪಗಳ ತಯಾರಿಕೆಯಲ್ಲಿನ ಕುಶಲತೆಯನ್ನು ಪ್ರದರ್ಶಿಸುವ ರೆಡ್ ರೋಡ್ ಕಾರ್ನೀವಲ್ ಪ್ರಪಂಚದಾದ್ಯಂತದ ಹೆಚ್ಚಿನ ಜನರಿಗೆ ಭವ್ಯತೆಯ ಬಗ್ಗೆ ಅರಿವು ಮೂಡಿಸಿದೆ ಎಂದಿದೆ.
ಮೋದಿ ಟ್ವಿಟ್ ಮಾಡಿ, ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆ ಮತ್ತು ಸಂತೋಷದ ವಿಷಯ! ದುರ್ಗಾ ಪೂಜೆಯು ನಮ್ಮ ಉತ್ತಮ ಸಂಪ್ರದಾಯಗಳು ಮತ್ತು ನೀತಿಗಳನ್ನು ಎತ್ತಿ ತೋರಿಸುತ್ತದೆ ಮತ್ತು ಕೋಲ್ಕತ್ತಾದ ದುರ್ಗಾಪೂಜೆಯು ಪ್ರತಿಯೊಬ್ಬರೂ ಪಡೆಯಬೇಕಾದ ಅನುಭವವಾಗಿದೆ ಎಂದಿದ್ದಾರೆ.
A matter of great pride and joy for every Indian!
Durga Puja highlights the best of our traditions and ethos. And, Kolkata’s Durga Puja is an experience everyone must have. https://t.co/DdRBcTGGs9
— Narendra Modi (@narendramodi) December 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.