ನವದೆಹಲಿ: ವಂದೇ ಭಾರತಂ ಅಂತಿಮ ಸ್ಪರ್ಧೆಯು ಡಿಸೆಂಬರ್ 19 ರಂದು ನವದೆಹಲಿಯಲ್ಲಿ ನಡೆಯಲಿದೆ. ಎಲ್ಲಾ 4 ವಲಯಗಳಿಂದ 949 ನೃತ್ಯಗಾರರನ್ನು ಒಳಗೊಂಡ 73 ಗುಂಪುಗಳು ಗ್ರ್ಯಾಂಡ್ ಫಿನಾಲೆಗೆ ಅರ್ಹತೆ ಪಡೆದಿವೆ. ನವದೆಹಲಿಯಲ್ಲಿ 2022 ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು 480 ನೃತ್ಯಗಾರರನ್ನು ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ವಲಯಗಳಿಂದ 949 ನೃತ್ಯಗಾರರನ್ನು ಒಳಗೊಂಡ 73 ಗುಂಪುಗಳು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಆಯೋಜಿಸಲಾಗುತ್ತಿರುವ ಅಖಿಲ ಭಾರತ ನೃತ್ಯ ಸ್ಪರ್ಧೆಯಾದ ‘ವಂದೇ ಭಾರತಂ-ನೃತ್ಯ ಉತ್ಸವ’ದ ಗ್ರ್ಯಾಂಡ್ ಫಿನಾಲೆಗೆ ಬಂದಿವೆ. ಡಿಸೆಂಬರ್ 19 ರಂದು ಜವಾಹರಲಾಲ್ ನೆಹರು ಸ್ಟೇಡಿಯಂ ಆಡಿಟೋರಿಯಂನಲ್ಲಿ ಫೈನಲ್ ನಡೆಯಲಿದೆ. ಭಾರತದ 75 ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ರಕ್ಷಣಾ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯವು ‘ವಂದೇ ಭಾರತಂ-ನೃತ್ಯ ಉತ್ಸವ’ವನ್ನು ಪ್ರಾರಂಭಿಸಿದೆ.
ಇದು ಜನ್ ಭಾಗಿದಾರಿಯನ್ನು ಆಧರಿಸಿದ ಒಂದು ವಿಶಿಷ್ಟ ಉಪಕ್ರಮವಾಗಿದ್ದು, ದೇಶದಾದ್ಯಂತದ ಉನ್ನತ ನೃತ್ಯ ಪ್ರತಿಭೆಗಳನ್ನು ಆಯ್ಕೆ ಮಾಡುವುದು ಮತ್ತು ಗಣರಾಜ್ಯೋತ್ಸವ ಪರೇಡ್ 2022 ರ ಸಮಯದಲ್ಲಿ ಅವರಿಗೆ ಪ್ರದರ್ಶನ ನೀಡಲು ಅವಕಾಶವನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
Courful participants from various states at #VandeBharatam fourth zonal level competition held in #Delhi . Winners to perform at Republic Day parade 2022.
Click below to see finale on 19th December: https://t.co/PG7zqzR9pG@MinOfCultureGoI @AmritMahotsav #EBSB #AmritMahotsav pic.twitter.com/12jSSVkTOp— PIB Culture (@PIBCulture) December 14, 2021
Participants in vibrant attires at #VandeBharatam fourth zonal level competition held in #Delhi.
Click at link below to watch grand finale on 19th December https://t.co/PG7zqzR9pG@MinOfCultureGoI @AmritMahotsav #EBSB #AmritMahotsav pic.twitter.com/ANypzkmAZR— PIB Culture (@PIBCulture) December 14, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.