ನವದೆಹಲಿ: ಉಕ್ಕಿನ ಮನುಷ್ಯ, ದೇಶದ ಮೊದಲ ಗೃಹ ಸಚಿವ, ರಾಷ್ಟ್ರದ ಏಕೀಕರಣದ ರುವಾರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದ್ದು, ರಾಷ್ಟ್ರ ಆ ಮಹಾ ಚೇತನಕ್ಕೆ ಗೌರವಾರ್ಪಣೆ ಮಾಡುತ್ತಿದೆ.
ಸರ್ದಾರ್ ಪಟೇಲರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ” ಸರ್ದಾರ್ ಪಟೇಲರನ್ನು ಅವರ ಪುಣ್ಯ ತಿಥಿಯಂದು ಸ್ಮರಿಸುತ್ತಿದ್ದೇವೆ. ಅವರ ಅಗಣಿತ ಸೇವೆ, ಅವರ ಆಡಳಿತ ಕೌಶಲ್ಯ ಮತ್ತು ನಮ್ಮ ರಾಷ್ಟ್ರವನ್ನು ಒಗ್ಗೂಡಿಸುವಲ್ಲಿ ಅವರ ಅವಿರತ ಪ್ರಯತ್ನಗಳಿಗಾಗಿ ಭಾರತ ಸದಾ ಅವರಿಗೆ ಕೃತಜ್ಞವಾಗಿರುತ್ತದೆ” ಎಂದಿದ್ದಾರೆ.
ಪ್ರಧಾನಿ ಮೋದಿಯವರು ಸರ್ದಾರ್ ಪಟೇಲರ ಗೌರವಾರ್ಥ ವಿಶ್ವದ ಅತೀದೊಡ್ಡ ಪ್ರತಿಮೆಯನ್ನು ನಿರ್ಮಾಣ ಮಾಡಿ ಅದಕ್ಕೆ ʼಏಕತಾ ಪ್ರತಿಮೆʼ ಎಂಬ ಹೆಸರು ನೀಡಿದ್ದಾರೆ. ಸ್ವಾತಂತ್ರ್ಯದ ಬಳಿಕ ಹಲವು ಸಂಸ್ಥಾನಗಳನ್ನು ಒಟ್ಟುಗೂಡಿಸಿ ಭವ್ಯ ಭಾರತವನ್ನು ನಿರ್ಮಾಣ ಮಾಡಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಸರ್ದಾರ್ ಪಟೇಲರಿಗೆ ಗೌರವಾರ್ಪಣೆ ಮಾಡಿದ್ದಾರೆ.
“ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿರುವ ಸರ್ದಾರ್ ಪಟೇಲರು ದೇಶದ ಏಕತೆ ಮತ್ತು ಸಮಗ್ರತೆಯ ಅದ್ಭುತ ವಾಸ್ತುಶಿಲ್ಪಿ. ಆ ಉಕ್ಕಿನ ಮನುಷ್ಯನ ಜೀವನದ ಪ್ರತಿ ಕ್ಷಣವೂ ಭಾರತದಲ್ಲಿ ರಾಷ್ಟ್ರ ಚೈತನ್ಯವನ್ನು ಜಾಗೃತಗೊಳಿಸಲು ಸಮರ್ಪಿತವಾಗಿದೆ. ಅವರ ಚಿಂತನೆಗಳು ದೇಶಕ್ಕೆ ಸದಾ ಮಾರ್ಗದರ್ಶನ ನೀಡುತ್ತವೆ. ಅಂತಹ ಮಹಾನ್ ಯುಗಪುರುಷನ ಪಾದಕ್ಕೆ ಕೋಟಿ ಕೋಟಿ ನಮನಗಳು” ಎಂದಿದ್ದಾರೆ.
Remembering Sardar Patel on his Punya Tithi. India will always be grateful to him for his monumental service, his administrative skills and the untiring efforts to unite our nation.
— Narendra Modi (@narendramodi) December 15, 2021
हर भारतीय के हृदय में बसने वाले देश की एकता व अखंडता के अद्भुत शिल्पी लौह पुरुष सरदार पटेल जी के जीवन का क्षण-क्षण भारत में एक राष्ट्र का भाव जागृत करने हेतु समर्पित रहा। उनके विचार सदैव देश का मार्गदर्शन करते रहेंगे।
ऐसे महान युगपुरुष व राष्ट्रीय गौरव के चरणों में कोटिशः वंदन। pic.twitter.com/OkW7sRK57p
— Amit Shah (@AmitShah) December 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.