ತಿರುವನಂತಪುರಂ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಕೆಲ ಮತಾಂಧರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸಿ ಪೋಸ್ಟ್ಗಳನ್ನು ಹಾಕಿದ್ದರು. ಈ ಘಟನೆಯಿಂದ ಮನನೊಂದಿರುವ ಮಲಯಾಳಂನ ನಿರ್ದೇಶಕ ಅಲಿ ಅಕ್ಬರ್ ಅವರು ಇಸ್ಲಾಂ ಅನ್ನು ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಿರುವ ಅವರು, “ಇಂದಿನಿಂದ ನಾನು ಮುಸ್ಲಿಂ ಅಲ್ಲ, ನಾನೊಬ್ಬ ಭಾರತೀಯ” ಎಂದಿದ್ದಾರೆ.
ವರದಿಗಳ ಪ್ರಕಾರ ಅವರು ಹಿಂದೂ ಧರ್ಮವನ್ನು ಸ್ವೀಕರಿಸ ತಮ್ಮ ಹೆಸರನ್ನು ನರಸಿಂಹನ್ ಎಂದು ಬದಲಾಯಿಸಿಕೊಳ್ಳಲಿದ್ದಾರೆ. ಅವರ ಪತ್ನಿಯೂ ಹಿಂದೂ ಧರ್ಮ ಸ್ವೀಕರಿಸಲಿದ್ದಾರೆ. ತನ್ನ ಇಬ್ಬರು ಮಕ್ಕಳಿಗೆ ಧರ್ಮ ಬದಲಾಯಿಸಲು ಸ್ವೀಕರಿಸಲು ಒತ್ತಾಯಿಸುವುದಿಲ್ಲ, ಅವರ ಇಷ್ಟದಂತೆ ಅವರು ಇರಬಹುದು ಎಂದು ಅವರು ಹೇಳಿದ್ದಾರೆ.
“ಇಂದು, ನಾನು ಹುಟ್ಟಿನಿಂದ ಪಡೆದ ಹೊದಿಕೆಯನ್ನು ಎಸೆಯುತ್ತಿದ್ದೇನೆ” ಎಂದು ಅಲಿ ಅಕ್ಬರ್ ಹೇಳಿದ್ದಾರೆ.
ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪೋಸ್ಟ್ ಬಗ್ಗೆ ಯಾವುದೇ ಮುಸ್ಲಿಂ ಧರ್ಮಗುರುಗಳು ಖಂಡನೆ ವ್ಯಕ್ತಪಡಿಸದ ಬಗ್ಗೆ ಕೂಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
இன்று முதல் நான் முஸ்லிம் அல்ல பாரதியன் நானும் என் குடும்பமும் He was known as Ali Akbar. A Muslim by birth.
On the death of Gen.Bipin Rawat, many people made celebrations in Kerala on social platforms.
By being deeply hurt with the facts pic.twitter.com/vJ2wvCdxmM
— 𓄂𖤍Bhairavi Nachiyar𖤍 பாண்டிய நாட்டு இளவரசி 🇮🇳 (@Bhairavinachiya) December 11, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.