ನವದೆಹಲಿ: ಇಂದು ಭಾರತ ಮತ್ತು ಬಾಂಗ್ಲಾದೇಶ ಮೈತ್ರಿ ದಿವಸ್ ಅನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮೂಲಕ ಉಭಯ ದೇಶಗಳ ಬಾಂಧವ್ಯವನ್ನು ಸ್ಮರಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, “ಇಂದು ಭಾರತ ಮತ್ತು ಬಾಂಗ್ಲಾದೇಶ ಮೈತ್ರಿ ದಿವಸ್ ಅನ್ನು ಆಚರಿಸುತ್ತಿವೆ. ನಮ್ಮ 50 ವರ್ಷಗಳ ಸ್ನೇಹದ ಅಡಿಪಾಯವನ್ನು ನಾವು ಜಂಟಿಯಾಗಿ ನೆನಪಿಸಿಕೊಳ್ಳುತ್ತೇವೆ ಮತ್ತು ಆಚರಿಸುತ್ತೇವೆ. ನಾನು ಪಿಎಂ ಶೇಖ್ ಹಸೀನಾ ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ. ಅವರು ನಮ್ಮ ಬಾಂಧವ್ಯವನ್ನು ಇನ್ನಷ್ಟು ವಿಸ್ತರಿಸಿದ್ದಾರೆ ಮತ್ತು ಗಾಢವಾಗಿಸಿದ್ದಾರೆ” ಎಂದಿದ್ದಾರೆ.
ಮಾರ್ಚ್ 2021 ರಲ್ಲಿ ಬಾಂಗ್ಲಾದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಡಿಸೆಂಬರ್ 6 ಅನ್ನು ಉಭಯ ದೇಶಗಳ ಮೈತ್ರಿ ದಿವಸ್ ಆಗಿ ಆಚರಿಸಲು ನಿರ್ಧರಿಸಲಾಯಿತು.
ಢಾಕಾ ಮತ್ತು ನವದೆಹಲಿ ಮಾತ್ರವಲ್ಲದೆ ವಿಶ್ವದ 18 ದೇಶಗಳಲ್ಲಿ ಮೈತ್ರಿ ದಿವಸ್ ಅನ್ನು ಸ್ಮರಿಸಲಾಗುತ್ತದೆ. ಆ ದೇಶಗಳೆಂದರೆ ಬೆಲ್ಜಿಯಂ, ಕೆನಡಾ, ಈಜಿಪ್ಟ್, ಇಂಡೋನೇಷ್ಯಾ, ರಷ್ಯಾ, ಕತಾರ್, ಸಿಂಗಾಪುರ್, ಯುಕೆ, ಆಸ್ಟ್ರೇಲಿಯಾ, ಫ್ರಾನ್ಸ್, ಜಪಾನ್, ಮಲೇಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಸ್ವಿಟ್ಜರ್ಲೆಂಡ್, ಥೈಲ್ಯಾಂಡ್, ಯುಎಇ ಮತ್ತು ಯುಎಸ್ಎ.
“ಮೈತ್ರಿ ದಿವಸ್ ಅನ್ನು ಆಚರಿಸುವುದು ಭಾರತ ಮತ್ತು ಬಾಂಗ್ಲಾದೇಶದ ಜನರ ನಡುವಿನ ಆಳವಾದ ಮತ್ತು ಅಚಲವಾದ ಸ್ನೇಹವನ್ನು ಪ್ರತಿಬಿಂಬಿಸುತ್ತದೆ, ಈ ಸ್ನೇಹ ರಕ್ತದಲ್ಲಿ ಬೆಸೆದುಕೊಂಡಿದೆ ಮತ್ತು ತ್ಯಾಗಗಳಲ್ಲಿ ಹಂಚಿಕೊಂಡಿದೆ” ಎಂದು ವಿದೇಶಾಂಗ ವಕ್ತಾರ ಹೇಳಿದ್ದಾರೆ.
ಇಂದ ನವದೆಹಲಿಯಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮವು ಎರಡೂ ದೇಶಗಳ ಭಾಗವಹಿಸುವಿಕೆಯನ್ನು ಕಾಣಲಿದೆ.
Today India and Bangladesh commemorate Maitri Diwas. We jointly recall and celebrate the foundations of our 50 years of friendship. I look forward to continue working with H.E. PM Sheikh Hasina to further expand and deepen our ties. #मैत्री_दिवस #মৈত্রী_দিবস#MaitriDiwas
— Narendra Modi (@narendramodi) December 6, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.