
ನವದೆಹಲಿ: ಡಿಸೆಂಬರ್ 6ರಂದು ಭಾರತ ಮತ್ತು ಬಾಂಗ್ಲಾದೇಶ ಮೈತ್ರಿ ದಿವಸ್ ಅನ್ನು ಆಚರಿಸಲಿದೆ.
ಮಾರ್ಚ್ 2021 ರಲ್ಲಿ ಬಾಂಗ್ಲಾದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಡಿಸೆಂಬರ್ 6 ಅನ್ನು ಮೈತ್ರಿ ದಿವಸ್ ಆಗಿ ಆಚರಿಸಲು ನಿರ್ಧರಿಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
“1971 ರಲ್ಲಿ ಬಾಂಗ್ಲಾದೇಶದ ವಿಮೋಚನೆಗೂ ಹತ್ತು ದಿನಗಳ ಮೊದಲು, ಭಾರತವು ಡಿಸೆಂಬರ್ 6, 1971 ರಂದು ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಿತು. ಬಾಂಗ್ಲಾದೇಶದೊಂದಿಗೆ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದೆ” ಎಂದು ಅವರು ಹೇಳಿದ್ದಾರೆ.
ಢಾಕಾ ಮತ್ತು ನವದೆಹಲಿಯನ್ನು ಹೊರತುಪಡಿಸಿ ವಿಶ್ವದ 18 ದೇಶಗಳಲ್ಲಿ ಮೈತ್ರಿ ದಿವಸ್ ಅನ್ನು ಸ್ಮರಿಸಲಾಗುತ್ತದೆ. ಆ ದೇಶಗಳೆಂದರೆ ಬೆಲ್ಜಿಯಂ, ಕೆನಡಾ, ಈಜಿಪ್ಟ್, ಇಂಡೋನೇಷ್ಯಾ, ರಷ್ಯಾ, ಕತಾರ್, ಸಿಂಗಾಪುರ್, ಯುಕೆ, ಆಸ್ಟ್ರೇಲಿಯಾ, ಫ್ರಾನ್ಸ್, ಜಪಾನ್, ಮಲೇಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಸ್ವಿಟ್ಜರ್ಲೆಂಡ್, ಥೈಲ್ಯಾಂಡ್, ಯುಎಇ ಮತ್ತು ಯುಎಸ್ಎ.
“ಮೈತ್ರಿ ದಿವಸ್ ಅನ್ನು ಆಚರಿಸುವುದು ಭಾರತ ಮತ್ತು ಬಾಂಗ್ಲಾದೇಶದ ಜನರ ನಡುವಿನ ಆಳವಾದ ಮತ್ತು ಅಚಲವಾದ ಸ್ನೇಹವನ್ನು ಪ್ರತಿಬಿಂಬಿಸುತ್ತದೆ, ಈ ಸ್ನೇಹ ರಕ್ತದಲ್ಲಿ ಬೆಸೆದುಕೊಂಡಿದೆ ಮತ್ತು ತ್ಯಾಗಗಳಲ್ಲಿ ಹಂಚಿಕೊಂಡಿದೆ” ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 6 ರಂದು ನವದೆಹಲಿಯಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮವು ಎರಡೂ ದೇಶಗಳ ಭಾಗವಹಿಸುವಿಕೆಯನ್ನು ಕಾಣಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


