
ನವದೆಹಲಿ: ಶಾಲಾ ಪಠ್ಯಪುಸ್ತಕಗಳಲ್ಲಿ ಐತಿಹಾಸಿಕ ವ್ಯಕ್ತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಅಪರಾಧಿಗಳು ಎಂಬಂತೆ ಬಿಂಬಿಸಲಾಗಿದೆ, ವಿವಿಧ ಅವಧಿಗಳು ಮತ್ತು ರಾಜವಂಶಗಳ ಮಾಹಿತಿಗಳನ್ನು ತಪ್ಪಾಗಿ ನೀಡಲಾಗಿದೆ, ಸಿಖ್ ಮತ್ತು ಮರಾಠ ಇತಿಹಾಸಗಳ ಬಗ್ಗೆ ಕಳಪೆ ಉಲ್ಲೇಖಗಳಿವೆ ಮತ್ತು ಮಹಿಳೆಯರ ಬಗ್ಗೆ ಅತ್ಯಂತ ಕಡಿಮೆ ಉಲ್ಲೇಖಗಳಿವೆ ಎಂದು ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
ಎನ್ಸಿಇಆರ್ಟಿ (ಶಿಕ್ಷಣ ಸಂಶೋಧನೆ ಮತ್ತು ತರಬೇತಿಗಾಗಿ ರಾಷ್ಟ್ರೀಯ ಮಂಡಳಿ) ಪಠ್ಯಪುಸ್ತಕಗಳ ವಿಷಯ ಮತ್ತು ವಿನ್ಯಾಸವನ್ನು ಪರಿಶೀಲಿಸಲು ರಾಜ್ಯಸಭಾ ಸಂಸದ ವಿನಯ್ ಸಹಸ್ರಬುದ್ದೆ ಅವರ ನೇತೃತ್ವದಲ್ಲಿ ರಚಿಸಲಾದ ಸಂಸದೀಯ ಸ್ಥಾಯಿ ಸಮಿತಿಯು ಮಂಗಳವಾರ ಸಂಸತ್ತಿಗೆ ‘ಶಾಲಾ ಪಟ್ಟಿದ ವಿಷಯ ಮತ್ತು ವಿನ್ಯಾಸ ಸುಧಾರಣೆ’ ವರದಿಯನ್ನು ಸಲ್ಲಿಕೆ ಮಾಡಿದೆ.
ಈ ವರದಿಯಲ್ಲಿ, ಶಾಲೆಗಳ ಇತಿಹಾಸ ಪಠ್ಯಪುಸ್ತಕಗಳಲ್ಲಿ ವಿಜಯನಗರ ಸಾಮ್ರಾಜ್ಯ, ಚಾಲುಕ್ಯ ಅರಸರು ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದ ವಿಕ್ರಮಾದಿತ್ಯ, ಚೋಳರು, ಗೊಂಡ್ವಾನರು ಮುಂತಾದ ಭಾರತವನ್ನು ಆಳಿದ ಶ್ರೇಷ್ಠ ರಾಜಮನೆತನಗಳನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದೆ.
ಪಠ್ಯಪುಸ್ತಕಗಳಲ್ಲಿ ಐತಿಹಾಸಿಕ ಸತ್ಯಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ತಪ್ಪಾಗಿ ಬಿಂಬಿಸಲಾಗಿದೆ, ಸ್ವಾತಂತ್ರ್ಯ ಸೇನಾನಿಗಳ ಕುರಿತ ತಪ್ಪುಗಳನ್ನು ಸರಿಪಡಿಸಬೇಕು ಮತ್ತು ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ಅಲ್ಲದೆ ಪಠ್ಯವು ನಾಲ್ಕು ವೇದಗಳು, ಭಗವದ್ಗೀತೆ, ಜೈನಧರ್ಮ ಮತ್ತಿತರ ವಿಭಿನ್ನ ಸಾಹಿತ್ಯವನ್ನು ಒಳಗೊಂಡಿರಬೇಕು ಎಂದು ವರದಿಯಲ್ಲಿ ತಿಳಿಸಿದೆ. ಮಾತ್ರವಲ್ಲದೆ ಕಪೋಲಕಲ್ಪಿತ, ಪೂರ್ವಾಗ್ರಹಪೀಡಿತ ಇತಿಹಾಸವು ಅಪಾಯಕಾರಿ ಎಂದಿದೆ.
ದೇಶದ ವಿವಿಧ ಪ್ರದೇಶಗಳ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಮತ್ತು ಪಾತ್ರವನ್ನು ಪ್ರಮುಖ ಇತಿಹಾಸಕಾರರೊಂದಿಗೆ ಚರ್ಚಿಸುವ ಮತ್ತು ಪರಿಶೀಲಿಸುವ ಅಗತ್ಯವಿದೆ ಎಂದು ಸಮಿತಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


