
ಜಿನೀವಾ: ದೇಶಗಳು ಕೊರೋನವೈರಸ್ನ ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿ ಯಾವುದೇ ಪ್ರಯಾಣ ಕ್ರಮಗಳನ್ನು ತೆಗೆದುಕೊಳ್ಳುವಾಗ “ಪುರಾವೆ, ಮಾಹಿತಿ ಮತ್ತು ಅಪಾಯ ಆಧಾರಿತ ವಿಧಾನವನ್ನು” ಅನ್ವಯಿಸಬೇಕು, ಇದರಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಸಂಭವನೀಯ ಸ್ಕ್ರೀನಿಂಗ್ ಅಥವಾ ಕ್ವಾರಂಟೈನ್ ಸೇರಿರುತ್ತದೆ. ಆದರೆ ಪ್ರಯಾಣಕ್ಕೆ ಏಕಾಏಕಿ ಸಾಮೂಹಿಕ ನಿಷೇಧ ಹೇರುವುದರಿಂದ ಓಮಿಕ್ರಾನ್ ಹರಡುವಿಕೆಯನ್ನು ತಡೆಗಟ್ಟಲಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಹೊರಡಿಸಿದ ಅಧಿಕಾರಿಗಳು ಮತ್ತು ಪ್ರಯಾಣಿಕರಿಗಾಗಿನ ಮಾರ್ಗಸೂಚಿಯಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟ, ಸಂಪೂರ್ಣ ಲಸಿಕೆಯನ್ನು ಹೊಂದಿರದ ಅಥವಾ ಹಿಂದೆ SARS-COV-2 ಸೋಂಕಿನ ಪುರಾವೆ ಹೊಂದಿಲ್ಲದ ಮತ್ತು ಆರೋಗ್ಯ ಪರಿಸ್ಥಿತಿ ಚೆನ್ನಾಗಿರದವರಿಗೆ ಪ್ರಯಾಣವನ್ನು ಮುಂದೂಡಲು ಸಲಹೆ ನೀಡಬೇಕು ಎಂದು ಹೇಳಿದೆ. ಇಂತವರು ರೋಗ ಮತ್ತು ಸಾವಿನ ಹೆಚ್ಚಿನ ಅಪಾಯದಲ್ಲಿರುವ ಕಾರಣ ಪ್ರಯಾಣವನ್ನು ಮುಂದೂಡಲು ಸಲಹೆ ನೀಡಲಾಗಿದೆ.
ಒಂದು ವಾರದ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ವರದಿಯಾದ ಓಮಿಕ್ರಾನ್ ಜಾಗತಿಕ ಮಟ್ಟದಲ್ಲಿ ಭೀತಿ ಸೃಷ್ಟಿಸಿದೆ. ಇದು ಪ್ರಯಾಣ ನಿಷೇಧಗಳಿಗೆ ಕಾರಣವಾಗಿದೆ
ನಿರ್ಗಮನ, ಸಾಗಣೆ ಮತ್ತು ಆಗಮನಕ್ಕೆ ಸಂಬಂಧಿಸಿದಂತೆ ದೇಶಗಳಲ್ಲಿನ ಅಧಿಕಾರಿಗಳು ಅಪಾಯವನ್ನು ತಗ್ಗಿಸಲು ಬಹು-ಪದರದ ವಿಧಾನವನ್ನು ಅನ್ವಯಿಸಬಹುದು, ಇದರಿಂದಾಗಿ ಓಮಿಕ್ರಾನ್ ರೂಪಾಂತರದ ಹರಡುವಿಕೆ ತಗ್ಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ.
“ಕ್ರಮಗಳು ಪ್ರಯಾಣದ ಮೊದಲು ಮತ್ತು ಆಗಮನದ ನಂತರ ಪ್ರಯಾಣಿಕರ ತಪಾಸಣೆಯನ್ನು ಒಳಗೊಂಡಿರಬಹುದು ಮತ್ತು ಕೋವಿಡ್ ಸಾಧ್ಯತೆಯ ಸಂಪೂರ್ಣ ಅಪಾಯದ ಮೌಲ್ಯಮಾಪನದ ನಂತರ SARS-COV-2 ಪರೀಕ್ಷೆ ಅಥವಾ ಅಂತರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್ ಅನ್ನು ಅನುಸರಿಸಬಹುದು” ಎಂದು ಅದು ಹೇಳಿದೆ.
ಎಲ್ಲಾ ಕ್ರಮಗಳು ಕೋವಿಡ್ ಅಪಾಯಕ್ಕೆ ಅನುಗುಣವಾಗಿರಬೇಕು, ಸಮಯ-ಸೀಮಿತವಾಗಿರಬೇಕು ಮತ್ತು ಪ್ರಯಾಣಿಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಅನ್ವಯಿಸಬೇಕು ಎಂದು ಅದು ಹೇಳಿದೆ.
“ಸಾಮೂಹಿಕ ಪ್ರಯಾಣ ನಿಷೇಧಗಳು ಅಂತರಾಷ್ಟ್ರೀಯವಾಗಿ ಕೋವಿಡ್ ಹರಡುವಿಕೆಯನ್ನು ತಡೆಯುವುದಿಲ್ಲ, ಮತ್ತು ಅವು ಜೀವನ ಮತ್ತು ಜೀವನೋಪಾಯಗಳ ಮೇಲೆ ಹೆಚ್ಚಿನ ಹೊರೆಯನ್ನುಂಟುಮಾಡುತ್ತವೆ” ಎಂದು ಅದು ಹೇಳಿದೆ.
ಸುಮಾರು 56 ದೇಶಗಳು ನವೆಂಬರ್ 28 ರ ಹೊತ್ತಿಗೆ ಓಮಿಕ್ರಾನ್ ಹರಡುವಿಕೆ ತಡೆಯುವ ಸಲುವಾಗಿ ಪ್ರಯಾಣ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಿವೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


