ಭುವನೇಶ್ವರ: ಫೋರ್ಬ್ಸ್ ಇಂಡಿಯಾ ಡಬ್ಲ್ಯೂ-ಪವರ್ 2021 ಪಟ್ಟಿಯಲ್ಲಿ ಬ್ಯಾಂಕರ್ ಅರುಂಧತಿ ಭಟ್ಟಾಚಾರ್ಯ ಮತ್ತು ನಟಿ ರಸಿಕಾ ದುಗ್ಗಲ್ ಅವರೊಂದಿಗೆ 45 ವರ್ಷದ ಬುಡಕಟ್ಟು ಆಶಾ ಕಾರ್ಯಕರ್ತೆ ಒಡಿಶಾದ ಸುಂದರ್ಗಢ್ ಜಿಲ್ಲೆಯ ಮಾಟಿಲ್ಡಾ ಕುಲ್ಲು ಕಾಣಿಸಿಕೊಂಡಿದ್ದರೆ. ಮೂಢನಂಬಿಕೆಯನ್ನು ಹೊಡೆದೋಡಿಸಿ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಇವರು ಜೀವನ ಮುಡಿಪಾಗಿಟ್ಟಿದ್ದಾರೆ.
15 ವರ್ಷಗಳ ಹಿಂದೆ ಒಡಿಶಾದ ಸುಂದರ್ಗಢ್ ಜಿಲ್ಲೆಯ ಬರಗಾಂವ್ ತೆಹಸಿಲ್ನ ಗರ್ಗಡ್ಬಹಲ್ ಗ್ರಾಮಕ್ಕೆ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿ ನೇಮಕಗೊಂಡ ಮಟಿಲ್ಡಾ ಅವರು ಕೆಲಸವನ್ನು ಪ್ರಾರಂಭಿಸಿದಾಗ ಅವರ ಕೆಲಸ ಅಷ್ಟು ಸುಲಭದ್ದಾಗಿರಲಿಲ್ಲ, ಏಕೆಂದರೆ ಅವರ ಹಳ್ಳಿಯ ಜನರು ರೋಗ ರುಜಿನಗಳನ್ನು ಗುಣಪಡಿಸಲು ಆಸ್ಪತ್ರೆಗೆ ಭೇಟಿ ನೀಡುವ ಬದಲು ಮಾಟಮಂತ್ರವನ್ನು ಆಶ್ರಯಿಸುತ್ತಿದ್ದರು.
“ಜನರು ಅನಾರೋಗ್ಯಕ್ಕೆ ಒಳಗಾದಾಗ ಆಸ್ಪತ್ರೆಗೆ ಹೋಗುವ ಬಗ್ಗೆ ಯೋಚಿಸುತ್ತಿರಲಿಲ್ಲ. ಆಸ್ಪತ್ರೆಗೆ ಹೋಗುವಂತೆ ನಾನು ಜನರಿಗೆ ಸಲಹೆ ನೀಡಿದಾಗ, ಅವರು ನನ್ನನ್ನು ಅಪಹಾಸ್ಯ ಮಾಡುತ್ತಿದ್ದರು. ನಾನೂ ಕೂಡ ಜಾತಿನಿಂದನೆ ಬಾಧೆಯನ್ನು ಅನುಭವಿಸಬೇಕಾಗಿತ್ತು” ಎಂದು ಮಾಟಿಲ್ಡಾ ಹೇಳುತ್ತಾರೆ.
“ಸ್ಥಳೀಯ ಮಾಟಗಾತಿಯ ಬಳಿಗೆ ಧಾವಿಸುವ ಬದಲು ವೈದ್ಯರನ್ನು ಭೇಟಿ ಮಾಡುವ ಅಗತ್ಯವನ್ನು ಜನರಿಗೆ ಅರ್ಥಮಾಡಿಕೊಳ್ಳಲು ನಾನು ವರ್ಷಗಳ ಕಾಲ ಕಷ್ಟಪಡಬೇಕಾಯಿತು” ಎಂದು ಅವರು ಹೇಳುತ್ತಾರೆ.
ಒಡಿಶಾದ 47,000ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರಾಗಿ, ನವಜಾತ ಶಿಶುಗಳು ಮತ್ತು ಹದಿಹರೆಯದ ಹುಡುಗಿಯರ ಆರೋಗ್ಯಕ್ಕಾಗಿ ಮನೆ ಬಾಗಿಲಿಗೆ ಭೇಟಿ ನೀಡುವುದು, ಪ್ರಸವಪೂರ್ವ ತಪಾಸಣೆ, ಪ್ರಸವೋತ್ತರ ತಪಾಸಣೆ, ಜನನದ ಸನ್ನದ್ಧತೆ, ಸ್ತನ್ಯಪಾನ ಮತ್ತು ಪೂರಕ ಆಹಾರ, ಮತ್ತು ಸಂತಾನೋತ್ಪತ್ತಿ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳು ಸೇರಿದಂತೆ ಸಾಮಾನ್ಯ ಸೋಂಕುಗಳ ತಡೆಗಟ್ಟುವಿಕೆ ಬಗ್ಗೆ ಮಹಿಳೆಯರೊಂದಿಗೆ ಸಮಾಲೋಚನೆಗಳನ್ನುನಡೆಸುವ ಕಾಯಕ ಮಾಡುತ್ತಿರುವ ಮಟಿಲ್ಡಾ ಅವರ ದಿನ ಸದಾ ಕೆಲಸದ ಹೊರೆಯೊಂದಿಗೆ ತುಂಬಿರುತ್ತದೆ.
ಅವರ ದಿನವು ಬೆಳಿಗ್ಗೆ ಐದು ಗಂಟೆಗೆ ಪ್ರಾರಂಭವಾಗುತ್ತದೆ, ನಾಲ್ವರ ಕುಟುಂಬಕ್ಕೆ ಮಧ್ಯಾಹ್ನದ ಊಟವನ್ನು ತಯಾರಿಸಿ, ಇತರ ಮನೆಗೆಲಸ ಮುಗಿಸಿ ನಂತರ ಮನೆ ಬಾಗಿಲಿಗೆ ಭೇಟಿ ನೀಡಲು ತನ್ನ ಸೈಕಲ್ನಲ್ಲಿ ಪಯಣಿಸುವ ಮೊದಲು ತನ್ನ ದನಗಳಿಗೆ ಆಹಾರವನ್ನು ನೀಡಲು ಅವರು ಮರೆಯುವುದಿಲ್ಲ. ಕಳೆದ ವರ್ಷ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಅವರು ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿರುವ ಶಂಕಿತ ಜನರನ್ನು ಪರೀಕ್ಷಿಸಲು ಪ್ರತಿದಿನ 50-60 ಮನೆಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ, ಇದರಿಂದ ಅವರ ಕೆಲಸದ ಒತ್ತಡ ಇನ್ನಷ್ಟು ಹೆಚ್ಚಾಯಿತು.
“ಪ್ರತಿದಿನ ನಾನು ಕೋವಿಡ್ ಶಂಕಿತರ ಕುಟುಂಬಗಳನ್ನು ಭೇಟಿ ಮಾಡುತ್ತೇನೆ ಮತ್ತು ನಂತರ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವರ ಬಗ್ಗೆ ತಿಳಿಸುತ್ತೇನೆ. ಕಳೆದ ವರ್ಷ ಕೋವಿಡ್ ರೋಗಿಗಳ ಬಗ್ಗೆ ಬಹಳಷ್ಟು ಕಳಂಕ ಸೃಷ್ಟಿಯಾದ ಕಾರಣ ಜನರು ಪರೀಕ್ಷೆಗೆ ಬರಲು ಹೆದರುತ್ತಿದ್ದರು” ಎನ್ನುತ್ತಾರೆ.
ಸಂಭಾವ್ಯ ಸೋಂಕಿತ ಜನರನ್ನು ಅವರ ಮನೆಗಳಲ್ಲಿ ಭೇಟಿಯಾಗಬೇಕಾಗಿದ್ದರೂ ಹೆಚ್ಚಿನ ಆಶಾಗಳಿಗೆ ಮುಖಗವಸುಗಳು, ಕೈಗವಸುಗಳು ಮತ್ತು ಸ್ಯಾನಿಟೈಸರ್ಗಳನ್ನು ಒದಗಿಸಲಾಗಿರಲಿಲ್ಲ. ಮೊದಲ ಅಲೆ ಕಡಿಮೆಯಾದ ನಂತರ ಮತ್ತು ವ್ಯಾಕ್ಸಿನೇಷನ್ ಪ್ರಾರಂಭವಾದ ನಂತರ ಮಟಿಲ್ಡಾ ಅವರು ಚುಚ್ಚುಮದ್ದನ್ನು ಪಡೆಯಲು ಗ್ರಾಮಸ್ಥರನ್ನು ಮನವೊಲಿಸಲು ಹರ ಸಾಹಸವನ್ನೇ ಮಾಡಬೇಕಾಯಿತು.
“ನಾನು ದೀರ್ಘಕಾಲದವರೆಗೆ ನನ್ನ ಹಳ್ಳಿಯಲ್ಲಿ ಜನರೊಂದಿಗೆ ಕೆಲಸ ಮಾಡಿದ್ದರಿಂದ, ಅವರು ನನ್ನ ಮಾತನ್ನು ಕೇಳಿದರು ಮತ್ತು ಲಸಿಕೆ ಹಾಕಿದರು” ಎಂದು ಮಟಿಲ್ಡಾ ಹೇಳುತ್ತಾರೆ. ಅವರು ಎಷ್ಟು ಕಷ್ಟಪಟ್ಟು ಕೆಲಸ ಮಾಡಿದರೂ, ಅವರ ಆದಾಯವು ಕೇವಲ 4,500 ರೂಪಾಯಿ ಎಂಬುದು ದುರಾದೃಷ್ಟಕರ.
“ಸಾಂಕ್ರಾಮಿಕ ಸಮಯದಲ್ಲಿ, ರಾಜ್ಯ ಸರ್ಕಾರವು 2,000 ರೂಪಾಯಿಯನ್ನು ಒಂದು ಬಾರಿ ಪ್ರೋತ್ಸಾಹಕವಾಗಿ ನೀಡಿತು ಎಂದು ಅವರು ಹೇಳುತ್ತಾರೆ.
Ms Matilda Kullu, ASHA worker & COVID warrior from Odisha’s Sundargarh district, has been featured in @ForbesIndia W-Power 2021 list.
She has played a crucial role in ending superstition related to health ailments.@MoHFW_INDIA pic.twitter.com/nsxtfJikRs
— Prasar Bharati News Services पी.बी.एन.एस. (@PBNS_India) November 30, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.