
ನವದೆಹಲಿ: ಬಾಂಗ್ಲಾದೇಶದ ಢಾಕಾ ಪೊಲೀಸರು ಶನಿವಾರ ನಗರದ ಮನೆಯೊಂದರಿಂದ 7 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ. ಈ ನಕಲಿ ನೋಟುಗಳು ಪಾಕಿಸ್ಥಾನದಲ್ಲಿ ತಯಾರಾಗಿವೆ ಎಂದು ತಿಳಿದು ಬಂದಿದೆ.
ಢಾಕಾದ ದಕ್ಷಿಣಖಾನ್ ಪ್ರದೇಶದ ಮನೆಯೊಂದರಲ್ಲಿ ನೀರಿನ ತೊಟ್ಟಿಯೊಳಗೆ 1400 ಕ್ಕೂ ಹೆಚ್ಚು ಬಂಡಲ್ಗಳಲ್ಲಿ ಹಣವನ್ನು ಬಚ್ಚಿಡಲಾಗಿತ್ತು. ಪಾಕಿಸ್ಥಾನದಲ್ಲಿ ತಯಾರಾದ ನಕಲಿ ನೋಟುಗಳನ್ನು ಶ್ರೀಲಂಕಾಕ್ಕೆ ಕಳುಹಿಸಲಾಗಿದ್ದು, ಅಲ್ಲಿಂದ ಚಟ್ಟೋಗ್ರಾಮ್ ಬಂದರಿಗೆ ಮಾರ್ಬಲ್ ಕಂಟೈನರ್ನಲ್ಲಿ ಸಾಗಿಸಲಾಗಿತ್ತು. ಬಾಂಗ್ಲಾದೇಶದ ಗಡಿ ಪ್ರದೇಶಗಳ ಮೂಲಕ ಅದನ್ನು ಭಾರತಕ್ಕೆ ತರಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ.
ಈ ಕರೆನ್ಸಿಯನ್ನು ಪಾಕಿಸ್ಥಾನದಲ್ಲಿ ತಯಾರಿಸಲಾಗಿದೆ ಮತ್ತು ವಿವಿಧ ಮಾರ್ಗಗಳ ಮೂಲಕ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಅಹ್ಮದ್ ಅಸಾದುಝಮಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿ ಫತೇಮಾ ಅಖ್ತರ್ ಪಾಕಿಸ್ಥಾನದಿಂದ ನಕಲಿ ಕರೆನ್ಸಿ ಸಂಗ್ರಹಿಸಿ ಭಾರತಕ್ಕೆ ಸಾಗಿಸುತ್ತಿದ್ದ ಅಂತರರಾಷ್ಟ್ರೀಯ ನಕಲಿ ಕರೆನ್ಸಿ ರಾಕೆಟ್ನ ಸಕ್ರಿಯ ಸದಸ್ಯ ಎಂದು ಅವರು ಹೇಳಿದ್ದಾರೆ. ಢಾಕಾದ ಖಿಲ್ಖೇತ್ ಮತ್ತು ಡೆಮ್ರಾ ಪ್ರದೇಶದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ನಕಲಿ ಕರೆನ್ಸಿ ದಂಧೆಯ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ನಂತರ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದರು. ಇಬ್ಬರು ಪಾಕಿಸ್ತಾನಿ ಪ್ರಜೆಗಳಾದ ಸುಲ್ತಾನ್ ಮತ್ತು ಶಫಿ ಅವರನ್ನು ನಕಲಿ ಕರೆನ್ಸಿ ದಂಧೆಯ ಕಿಂಗ್ಪಿನ್ಗಳೆಂದು ಅವರು ಹೆಸರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


