ಗುವಾಹಟಿ: ಅಸ್ಸಾಂ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ 26 ಗೋವು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ ಮತ್ತು ಅವರಿಂದ 68 ಗೋವುಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಾಗಾಂವ್ ಪೊಲೀಸರು ಶನಿವಾರ ರಾತ್ರಿ ಜಿಲ್ಲೆಯ ವಿವಿಧೆಡೆ ನಾಕಾ ತಪಾಸಣೆ ನಡೆಸಿ ಈ ಕಾರ್ಯಾಚರಣೆ ನಡೆಸಿದರು ಎಂದು ಮೂಲಗಳು ತಿಳಿಸಿದೆ.
ಸ್ಥಳೀಯ ಮಾರುಕಟ್ಟೆಯ ಚಲನ್ಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಹಸು ಕಳ್ಳಸಾಗಾಣಿಕೆ ತಂಡವು ಅಸ್ಸಾಂನ ಗಡಿಯಿಂದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ರವಾನಿಸಲು ಪ್ರಯತ್ನಿಸುತ್ತಿತ್ತು. ಹಸುಗಳನ್ನು ಸಾಗಿಸಲು ನಕಲಿ ಪ್ರಮಾಣಪತ್ರಗಳನ್ನು ಬಳಸಿಕೊಳ್ಳುತ್ತಿರುವ ನಕಲಿ ದಾಖಲೆಗಳ ದಂಧೆಯನ್ನು ನಾಗಾಂವ್ ಪೊಲೀಸರು ವಿಫಲಗೊಳಿಸಿದ್ದಾರೆ.
ಈ ಭರ್ಜರಿ ಕಾರ್ಯಾಚರಣೆಯ ವೇಳೆ ಪೊಲೀಸರು ಒಂಬತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದು, 35 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. 21 ಹಸು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಗೋವು ಕಳ್ಳಸಾಗಣೆ ದಂಧೆಯ ಮಾಸ್ಟರ್ ಮೈಂಡ್ಗಳಾದ ಜಾಹಿರ್ ಅಬ್ಬಾಸ್, ಅಫ್ನೂರ್ ಅಲಿ ಇನ್ನೂ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಗುರುವಾರ ರಾತ್ರಿ ನಾಗಾಂವ್ ಪೊಲೀಸರು ಹಸು ಕಳ್ಳಸಾಗಣೆ ವಿರುದ್ಧ ಜಿಲ್ಲೆಯಲ್ಲಿ ಮತ್ತೊಂದು ಸರಣಿ ಕಾರ್ಯಾಚರಣೆ ನಡೆಸಿದ್ದರು. ಗಡಿಯಾಚೆಗಿನ ಕಸಾಯಿಖಾನೆಗಳಿಗೆ ತೆರಳುತ್ತಿದ್ದ ರೂ 20 ಲಕ್ಷ ಮೌಲ್ಯದ 25 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದರು. ಜಿಲ್ಲೆಯ ರಾಹಾ ಪ್ರದೇಶದಲ್ಲಿ ನಾಕಾ ತಪಾಸಣೆಯ ವೇಳೆ ನಾಗಾಂವ್ ಪೊಲೀಸರು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿ ಎಸ್ಪಿ ಧ್ರುಬಾ ಬೋರಾ ನೇತೃತ್ವದ ಪೊಲೀಸ್ ತಂಡವು ಐವರು ಕಳ್ಳಸಾಗಣೆದಾರರಾದ ಅಜ್ಮತ್ ಅಲಿ, ಸಫಿಕುಲ್ ಅಲಿ, ಮುಕ್ಸೆದುಲ್ ರೆಹಮಾನ್, ಅಮಿನುಲ್ ಹಸನ್ ಮತ್ತು ಗುಲ್ಜಾರ್ ಹುಸೇನ್ ಅವರನ್ನು ಬಂಧಿಸಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಗೋಕಳ್ಳ ಸಾಗಾಣೆದಾರರ ವಿರುದ್ಧ ಅಸ್ಸಾಂ ಪೊಲೀಸರು ಸರಣಿ ಕಾರ್ಯಾಚರಣೆ ಕೈಗೊಂಡಿದ್ದು, ಇನ್ನಷ್ಟು ಖದೀಮರು ಸಿಕ್ಕಿ ಬೀಳುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.