ನವದೆಹಲಿ: ಇಂದು ಅಮೆರಿಕ ಸಂಸದರ ನಿಯೋಗವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ.
ಈ ಸಂದರ್ಭದಲ್ಲಿ ಮೋದಿ, ಹಂಚಿಕೊಂಡ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರವಾಗಿರುವ ಭಾರತ-ಯುಎಸ್ನ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಳಗೊಳಿಸುವಲ್ಲಿ ಯುಎಸ್ ಕಾಂಗ್ರೆಸ್ನ ಸ್ಥಿರ ಬೆಂಬಲ ಮತ್ತು ರಚನಾತ್ಮಕ ಪಾತ್ರ ಶ್ಲಾಘನೀಯ ಎಂದಿದ್ದಾರೆ.
ಪ್ರಧಾನ ಮಂತ್ರಿ ಕಚೇರಿ (PMO)ಯ ಹೇಳಿಕೆಯ ಪ್ರಕಾರ, ಯುಎಸ್ ಕಾಂಗ್ರೆಸ್ ನಿಯೋಗದ ನೇತೃತ್ವವನ್ನು ಸೆನೆಟರ್ ಜಾನ್ ಕಾರ್ನಿನ್ ವಹಿಸಿದ್ದರು ಮತ್ತು ಸೆನೆಟರ್ಗಳಾದ ಮೈಕೆಲ್ ಕ್ರಾಪೋ, ಥಾಮಸ್ ಟ್ಯೂಬರ್ವಿಲ್ಲೆ ಮತ್ತು ಮೈಕೆಲ್ ಲೀ ಮತ್ತು ಕಾಂಗ್ರೆಸ್ ಸದಸ್ಯರಾದ ಟೋನಿ ಗೊಂಜಾಲ್ಸ್ ಮತ್ತು ಜಾನ್ ಕೆವಿನ್ ಎಲಿಜೆ ಅವರನ್ನು ನಿಯೋಗ ಒಳಗೊಂಡಿತ್ತು.
ಕಾರ್ನಿನ್ ಅವರು ಭಾರತ ಮತ್ತು ಭಾರತೀಯ ಅಮೆರಿಕನ್ನರ ಸೆನೆಟ್ ಕಾಕಸ್ನ ಸಹ-ಸಂಸ್ಥಾಪಕರು ಮತ್ತು ಸಹ-ಅಧ್ಯಕ್ಷರಾಗಿದ್ದಾರೆ.
“ದೊಡ್ಡ ಮತ್ತು ವೈವಿಧ್ಯಮಯ ಜನಸಂಖ್ಯೆಯ ಸವಾಲುಗಳ ನಡುವೆಯೂ ಭಾರತದಲ್ಲಿನ ಕೋವಿಡ್ ಪರಿಸ್ಥಿತಿಯ ಅತ್ಯುತ್ತಮ ನಿರ್ವಹಣೆಯನ್ನು ಕಾಂಗ್ರೆಸ್ ನಿಯೋಗವು ಶ್ಲಾಘಿಸಿದೆ. ಕಳೆದ ಒಂದು ಶತಮಾನದ ಕೆಟ್ಟ ಸಾಂಕ್ರಾಮಿಕವನ್ನು ನಿರ್ವಹಿಸುವಲ್ಲಿ ದೇಶದ ಪ್ರಜಾಪ್ರಭುತ್ವ ನೀತಿಯ ಆಧಾರದ ಮೇಲೆ ಜನರ ಭಾಗವಹಿಸುವಿಕೆ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ಹೇಳಿದರು” ಎಂದು ಪಿಎಂಒ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.