
ಲಕ್ನೋ: 1970 ರ ದಶಕದಲ್ಲಿ ಪೂರ್ವ ಪಾಕಿಸ್ಥಾನದಿಂದ ವಲಸೆ ಬಂದ ಬಂಗಾಳಿ ಹಿಂದೂಗಳಿಗೆ ಪುನರ್ವಸತಿ ಯೋಜನೆಯನ್ನು ಪ್ರಾರಂಭಿಸುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಅಧಿಕೃತ ಬಿಡುಗಡೆಯ ಪ್ರಕಾರ, ಉತ್ತರ ಪ್ರದೇಶ ಸರ್ಕಾರವು 1970 ರಲ್ಲಿ ಪೂರ್ವ ಪಾಕಿಸ್ಥಾನ ಅಂದರೆ ಈಗಿನ ಬಾಂಗ್ಲಾದೇಶದಿಂದ ಕಾನ್ಪುರಕ್ಕೆ ಬಂದ 63 ಹಿಂದೂ ಬಂಗಾಳಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಿದೆ.
“ಈ ಕುಟುಂಬಗಳಿಗೆ ಕೃಷಿ ಕೆಲಸ ಮತ್ತು ವಸತಿಗಾಗಿ ಮಂಜೂರು ಮಾಡಿದ ಕಾನ್ಪುರ ದೇಹತ್ ಜಿಲ್ಲೆಯಲ್ಲಿನ ಸುಮಾರು 121.41 ಹೆಕ್ಟೇರ್ ಭೂಮಿಯಲ್ಲಿ ಪುನರ್ವಸತಿ ನೀಡಲಾಗುವುದು” ಎಂದು ಪ್ರಕಟಣೆ ತಿಳಿಸಿದೆ.
ಕುಟುಂಬಗಳಿಗೆ ಕೃಷಿಗಾಗಿ 2 ಎಕರೆ ಭೂಮಿ ಮತ್ತು ವಾಸಕ್ಕೆ 200 ಚದರ ಮೀಟರ್ ಪ್ರದೇಶವನ್ನು 30 ವರ್ಷಗಳವರೆಗೆ ರೂ 1ಕ್ಕೆ ಲೀಸ್ನಲ್ಲಿ ನೀಡಲಾಗುವುದು, ಇದನ್ನು ಇನ್ನೂ 30 ವರ್ಷಗಳವರೆಗೆ ಎರಡು ಬಾರಿ ವಿಸ್ತರಿಸಬಹುದು ಎಂದು ಅದು ಹೇಳಿದೆ.
ಈ ಕುಟುಂಬಗಳಿಗೂ ಮನೆ ನಿರ್ಮಾಣಕ್ಕೆ 1.2 ಲಕ್ಷ ನೀಡುವುದಾಗಿ ಸರ್ಕಾರ ಹೇಳಿದೆ.
“ಒಟ್ಟು 65 ಹಿಂದೂ ಬಂಗಾಳಿ ಕುಟುಂಬಗಳಿಗೆ ಹಸ್ತಿನಾಪುರ ಜಿಲ್ಲೆಯ ಮದನ್ ಯಾರ್ನ್ ಮಿಲ್ನಲ್ಲಿ ಕೆಲಸ ನೀಡುವ ಮೂಲಕ ಪುನರ್ವಸತಿ ನೀಡಲಾಯಿತು ಆದರೆ ಆಗಸ್ಟ್ 8, 1984 ರಂದು ಈ ಮಿಲ್ ಅನ್ನು ಮುಚ್ಚಲಾಯಿತು. ಈಗ, ಆ 65 ಕುಟುಂಬಗಳಲ್ಲಿ, ಎರಡು ಸದಸ್ಯರು ಸಾವನ್ನಪ್ಪಿದ್ದಾರೆ. 63 ಕುಟುಂಬಗಳು ಪುನರ್ವಸತಿಗಾಗಿ ಕಾಯುತ್ತಿವೆ” ಎಂದು ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


