ನವದೆಹಲಿ: ಪೋಲೆಂಡ್ನಲ್ಲಿ ನಡೆದ ISSF ಪ್ರೆಸಿಡೆಂಟ್ಸ್ ಕಪ್ ಶೂಟಿಂಗ್ ಈವೆಂಟ್ನಲ್ಲಿ ಪದಕ ಗೆದ್ದ ಭಾರತೀಯ ಶೂಟರ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಭಿನಂದಿಸಿದ್ದಾರೆ.
ISSF ಪ್ರೆಸಿಡೆಂಟ್ಸ್ ಕಪ್ನಲ್ಲಿ ಪದಕ ಗೆದ್ದ ಶೂಟರ್ಗಳಾದ ಮನು ಭಾಕರ್, ಸೌರಭ್ ಚೌಧರಿ, ರಾಹಿ ಸರ್ನೋಬತ್ ಮತ್ತು ಅಭಿಷೇಕ್ ವರ್ಮಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಇವರ ಸಾಧನೆಗಳ ಬಗ್ಗೆ ದೇಶ ಹೆಮ್ಮೆಪಡುತ್ತದೆ ಎಂದಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ISSF ಪ್ರೆಸಿಡೆಂಟ್ಸ್ ಕಪ್ ಶೂಟಿಂಗ್ ಈವೆಂಟ್ನಲ್ಲಿ ಪದಕ ಗೆದ್ದ ಮನು ಭಾಕರ್, ಸೌರಭ್ ಚೌಧರಿ, ರಾಹಿ ಸರ್ನೋಬತ್ ಮತ್ತು ಅಭಿಷೇಕ್ ವರ್ಮಾ ಅವರಿಗೆ ಅಭಿನಂದನೆಗಳು. ನಿಮ್ಮ ಅದ್ಬುತ ಪ್ರದರ್ಶನದ ಬಗ್ಗೆ ಭಾರತದ ಜನರು ಹೆಮ್ಮೆಪಡುತ್ತಾರೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗಾಗಿ ಶುಭಾಶಯಗಳು” ಎಂದಿದ್ದಾರೆ.
ಭಾರತ ಐದು ಪದಕಗಳೊಂದಿಗೆ ISSF ಪ್ರೆಸಿಡೆಂಟ್ಸ್ ಕಪ್ ಅನ್ನು ಸಮಾಪನಗೊಳಿಸಿದೆ. ಮನು ಭಾಕರ್ ಎರಡು ಚಿನ್ನದ ಪದಕಗಳನ್ನು ಗೆದ್ದರೆ, ರಾಹಿ ಸರ್ನೋಬಾತ್ ಅಂತಿಮ ದಿನ ಬೆಳ್ಳಿ ಗೆದ್ದರು. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೌರಭ್ ಚೌಧರಿ ವೈಯಕ್ತಿಕ ಬೆಳ್ಳಿ ಮತ್ತು ಅಭಿಷೇಕ್ ವರ್ಮಾ ವೈಯಕ್ತಿಕ ಕಂಚಿನ ಪದಕ ಗೆದ್ದಿದ್ದಾರೆ.
Congratulations to @realmanubhaker, @SarnobatRahi, @SChaudhary2002 and @abhishek_70007 for wining medals at the @ISSF_Shooting President’s Cup in Poland. The people of India are proud of their stupendous performance. Best wishes to these athletes for their future endeavours. pic.twitter.com/7hyHnDs0yM
— Narendra Modi (@narendramodi) November 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.