ನವದೆಹಲಿ: ಕಳೆದ ಏಳು ವರ್ಷಗಳಲ್ಲಿ ಭಾರತವು ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯಕ್ಕೆ 1,55,377 ಮೆಗಾವ್ಯಾಟ್ (MW) ಅನ್ನು ಸೇರಿಸಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪ್ರಕಾರ, ಭಾರತವು 2007-08ರಲ್ಲಿ ಶೇ.16.6ರಷ್ಟು ಬೃಹತ್ ವಿದ್ಯುತ್ ಕೊರತೆಯನ್ನು ಹೊಂದಿತ್ತು. 2011-12ರಲ್ಲಿಯೂ ಶೇ.10.6ರಷ್ಟಿತ್ತು. ಆದರೀಗ ಕೊರತೆ ಬಹುತೇಕ ನಿವಾರಿಸಲ್ಪಟ್ಟಿದೆ.
“ಸರ್ಕಾರದ ಬಹುಮುಖ, ಸಮಗ್ರ ಕ್ರಮ ಮತ್ತು ಪ್ರಯತ್ನಗಳ ಫಲವಾಗಿ ಕಳೆದ 3 ವರ್ಷಗಳಲ್ಲಿ ಸತತವಾಗಿ ಈ ಕೊರತೆಯು ಬಹುತೇಕ ಅಳಿಸಿಹೋಗಿದೆ. 2020-21 ರಲ್ಲಿ ಶೇ.4, 2019-20 ರಲ್ಲಿ ಶೇ.7 ಮತ್ತು 2018-19ರಲ್ಲಿ ಶೇ.8ರಷ್ಟು ಕೊರತೆ ಇದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
“ಪ್ರಸಕ್ತ ವರ್ಷ ಅಕ್ಟೋಬರ್ ವರೆಗೆ ಕೊರತೆ 1.2 ಶೇಕಡಾ ಇದೆ. ಮಾನ್ಸೂನ್ ನಂತರದ ವಿದ್ಯುತ್ ಉತ್ಪಾದನೆಯ ಮೇಲಿನ ವಾರ್ಷಿಕ ಒತ್ತಡದಿಂದ ಈ ಕೊರತೆ ಇದೆ. ಇದು ವರ್ಷಾಂತ್ಯದ ವೇಳೆಗೆ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ” ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.