ನವದೆಹಲಿ : ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದಡಿಯ ಭಾರತೀಯ ಮಾನಕ ಸಂಸ್ಥೆ (ಬಿ.ಐ.ಎಸ್.) ಯು ದೀಪಾವಳಿಯ ಸಂದರ್ಭದಲ್ಲಿ ಹಾಲ್ ಮಾರ್ಕ್ ಇರುವ ಆಭರಣಗಳನ್ನು ಮಾತ್ರ ಖರೀದಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಜನತೆಗೆ ಮನವಿ ಮಾಡಿದೆ.
ದೀಪಾವಳಿ ಸಂದರ್ಭಗಳಲ್ಲಿ ಚಿನ್ನದ ಖರೀದಿ ಕುಟುಂಬಕ್ಕೆ ಸಮೃದ್ಧಿ ಮತ್ತು ಸಂತಸ ತರುತ್ತದೆ ಎಂದು ನಂಬಲಾಗಿದೆ ಮತ್ತು ಇದನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೊಟ್ಟ ಹಣಕ್ಕೆ ಉತ್ತಮ ಮೌಲ್ಯಪಡೆಯಲು ತಾವು ಖರೀದಿಸುವ ಬಂಗಾರದ ಶುದ್ಧತ್ವವನ್ನು ಖಾತ್ರಿಪಡಿಸಿಕೊಳ್ಳಲು ಅರಿವು ಹೊಂದುವುದು ಮಹತ್ವದ್ದಾಗಿದೆ. ಹೀಗಾಗಿ ಖರೀದಿಗೆ ಮುನ್ನ ಕೆಲವು ಅಂಶಗಳನ್ನು ಗಮನದಲ್ಲಿಡಬೇಕು ಎಂದು ಬಿಐಎಸ್ ಹೇಳಿದೆ.
2021ರ ಜೂನ್ 23ರಿಂದ ಅನ್ವಯವಾಗುವಂತೆ, 14,18 ಮತ್ತು 22 ಕ್ಯಾರೆಟ್ ಚಿನ್ನದ ಆಭರಣ/ ಕಲಾಕೃತಿಗಳಿಗೆ ಹಾಲ್ ಮಾರ್ಕ್ ಅನ್ನು ದೇಶದ 256 ಜಿಲ್ಲೆಗಳಲ್ಲಿ ಕಡ್ಡಾಯ ಮಾಡಲಾಗಿದೆ. ಈ 256 ಜಿಲ್ಲೆಗಳು ಕನಿಷ್ಠ ಒಂದು ಪರೀಕ್ಷೆ ಮತ್ತು ಹಾಲ್ ಮಾರ್ಕಿಂಗ್ ಕೇಂದ್ರವನ್ನು ಹೊಂದಿರುವ ಜಿಲ್ಲೆಗಳಾಗಿವೆ. ಈ 256 ಜಿಲ್ಲೆಗಳ ಪಟ್ಟಿ ಬಿ.ಐ.ಎಸ್. ವೆಬ್ ಸೈಟ್ www.bis.gov.in ನಲ್ಲಿ ಲಭ್ಯವಿದೆ.
ಬಿಐಎಸ್ ನೋಂದಾಯಿತ ಆಭರಣಕಾರರು ಮಾತ್ರ ಹಾಲ್ ಮಾರ್ಕ್ ಆಭರಣಗಳನ್ನು ಮಾರಾಟ ಮಾಡಬಹುದು. ನಿಮ್ಮ ಜಿಲ್ಲೆಯಲ್ಲಿ ಬಿಐಎಸ್ ನೋಂದಾಯಿತ ಆಭರಣ ವ್ಯಾಪಾರಿಗಳ ವಿವರಗಳನ್ನು ಬಿಐಎಸ್ ಸೈಟ್ನಿಂದ ಪಡೆಯಬಹುದಾಗಿದೆ.
ಬಿ.ಐ.ಎಸ್. ನೋಂದಾಯಿತ ಆಭರಣಕಾರರಿಂದ ಕೇವಲ ಹಾಲ್ ಮಾರ್ಕ್ ಇರುವ ಚಿನ್ನ/ಬೆಳ್ಳಿಯ ಆಭರಣ ಮತ್ತು ಕಲಾಕೃತಿಗಳನ್ನು ಮಾತ್ರ ಖರೀದಿಸಿ ; ಒಂದೊಮ್ಮೆ ಹಾಲ್ ಮಾರ್ಕ್ ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸದಿದ್ದರೆ, ಚಿನ್ನಾಭರಣದಂಗಡಿಯವರಿಂದ ಮ್ಯಾಗ್ನಿಫೈಯಿಂಗ್ ಗಾಜು ಕೇಳಿ ಪಡೆದು ಹಾಲ್ ಮಾರ್ಕ್ ಇರುವ ಚಿನ್ನದ ಆಭರಣ/ಕಲಾಕೃತಿಗಳಲ್ಲಿ ಪರೀಕ್ಷಿಸಿ ; ಹಾಲ್ ಮಾರ್ಕ್ ಇರುವ ಆಭರಣದ ಮಾರಾಟದ ಬಿಲ್ ಅಥವಾ ಇನ್ವಾಯ್ಸ್ ಪ್ರತಿ ವಸ್ತುವಿಗೆ ಪ್ರತ್ಯೇಕವಾಗಿ ವಿವರಣೆ, ಅಮೂಲ್ಯ ಲೋಹದ ನಿವ್ವಳ ತೂಕ, ಕ್ಯಾರೆಟ್ ನಲ್ಲಿ ಶುದ್ಧತೆ ಮತ್ತು ಸೂಕ್ಷ್ಮತೆ ಮತ್ತು ಹಾಲ್ ಮಾರ್ಕಿಂಗ್ ಶುಲ್ಕಗಳನ್ನು ಸೂಚಿಸುತ್ತದೆ ಹೀಗಾಗಿ ಆಭರಣ ಖರೀದಿಗೆ ಬಿಲ್ಗೆ ಒತ್ತಾಯಿಸಿ ಎಂದಿದೆ.
इस धनतेरस सोना ख़रीदते समय हॉलमार्क के निशान ज़रूर सुनिश्चित कर लें, क्यूंकि हॉलमार्क है, तो सोना है।#Dhanteras2021 #Hallmark #consumerprotection #BIS @jagograhakjago @PiyushGoyalOffc @raosahebdanve pic.twitter.com/8NztGVMkDL
— BIS (@IndianStandards) November 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.