ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯುಕೆ ಪ್ರಧಾನಿ ಜೊತೆಗೂಡಿ ಗ್ಲಾಸ್ಗೋದಲ್ಲಿ ಸಣ್ಣ ದ್ವೀಪ ರಾಷ್ಟ್ರಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ʼರೆಸಿಲಿಯೆಂಟ್ ಐಸ್ಲ್ಯಾಂಡ್ ಸ್ಟೇಟ್ಸ್ (IRIS)ʼ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ.
ಈ ಉಪ್ರಮ ಅತ್ಯಂತ ದುರ್ಬಲ ರಾಷ್ಟ್ರಗಳಿಗೆ ಏನಾದರೂ ಮಾಡುವಲ್ಲಿ ಹೊಸ ಭರವಸೆ, ಹೊಸ ವಿಶ್ವಾಸ ಮತ್ತು ತೃಪ್ತಿಯನ್ನು ನೀಡುತ್ತದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
“ಹಿಂದುಳಿದ ದ್ವೀಪ ರಾಜ್ಯಗಳಿಗೆ ಮೂಲಸೌಕರ್ಯಗಳ ಪ್ರಾರಂಭವು ಹೊಸ ಭರವಸೆಯನ್ನು ನೀಡುತ್ತದೆ. ಇದು ಅತ್ಯಂತ ದುರ್ಬಲ ರಾಷ್ಟ್ರಗಳಿಗೆ ಏನನ್ನಾದರೂ ಮಾಡಲು ನಮಗೆ ಸಂತೃಪ್ತಿಯನ್ನು ನೀಡುತ್ತದೆ” ಎಂದು ಅವರು ಹೇಳಿದರು.
ಗ್ಲಾಸ್ಗೋದಲ್ಲಿ ನಡೆದ COP26 ಹವಾಮಾನ ಶೃಂಗಸಭೆಯ ಎರಡನೇ ದಿನದಂದು ಪ್ರಧಾನಿ ಮೋದಿ ಅವರು ಬ್ರಿಟಿಷ್ ಪ್ರಧಾನಿ ಜಾನ್ಸನ್ ಬೋರಿಸ್ ಜಾನ್ಸನ್ ಜೊತೆಗೂಡಿ IRIS ಉಪಕ್ರಮವನ್ನು ಆರಂಭಿಸಿದರು. ಈ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಕೂಡ ಭಾಗವಹಿಸಿದ್ದರು.
Speaking at the launch of ‘Infrastructure for Resilient Island States’ initiative. https://t.co/WMLYr56R0M
— Narendra Modi (@narendramodi) November 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.