ಟೊರೆಂಟೋ: ಕೆನಡಾದ ಒಂಟಾರಿಯೊದಲ್ಲಿ ‘ಹಿಂದೂ ಪರಂಪರೆ ತಿಂಗಳು’ ಆಚರಣೆಗಳು ಪ್ರಾರಂಭವಾಗಿವೆ. ಟೊರೊಂಟೋದಲ್ಲಿನ ಭಾರತದ ಕಾನ್ಸುಲ್ ಜನರಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಿಂದೂ ಪರಂಪರೆಯ ತಿಂಗಳನ್ನು ಆಚರಿಸುವ ಹಿನ್ನೆಲೆಯಲ್ಲಿ ಗ್ರೇಟರ್ ಟೊರೊಂಟೊದಾದ್ಯಂತ ಬೃಹತ್ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲಾಗಿದೆ.
ಹಿಂದೂ ಫೋರಮ್ ಕೆನಡಾ ರಾಷ್ಟ್ರದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಒಂಟಾರಿಯೊ ಪ್ರಾಂತ್ಯದಲ್ಲಿ ಹಿಂದೂ ಪರಂಪರೆ ತಿಂಗಳ ಆಚರಣೆಯನ್ನು ಪ್ರಾರಂಭಿಸಿದೆ. ಇಲ್ಲಿ ಸುಮಾರು ಸುಮಾರು ಒಂದು ಮಿಲಿಯನ್ ಹಿಂದೂಗಳು ನೆಲೆಯಾಗಿದ್ದಾರೆ.
ದೇವಿ ಮಂದಿರಧ ಸಹಯೋಗದೊಂದಿಗೆ, ಕೆನಡಾದ ಹಿಂದೂಗಳ ಗ್ರಾಸ್ ರೂಟ್ ಸಂಸ್ಥೆಯು ಗ್ರೇಟರ್ ಟೊರೊಂಟೊ ಪ್ರದೇಶದಾದ್ಯಂತ ಹಿಂದೂ ಪರಂಪರೆಯ ತಿಂಗಳನ್ನು ಆಚರಿಸಲು ಬೃಹತ್ ಜಾಹೀರಾತು ಫಲಕಗಳನ್ನು ಪ್ರದರ್ಶಿಸಿದೆ.
“ದೇವಿ ಮಂದಿರ ಮತ್ತು ಹಿಂದೂ ಫೋರಮ್ ಕೆನಡಾ ಒಟ್ಟಾಗಿ ಹಿಂದೂ ಪರಂಪರೆಯ ಮಾಸವನ್ನು ಆಚರಿಸಲು ಇಂದು ಅತ್ಯಂತ ಸಂತೋಷದಾಯಕ ಮತ್ತು ಮಂಗಳಕರ ದಿನವಾಗಿದೆ. ಡಿಸೆಂಬರ್ 2016 ರಲ್ಲಿ, ಈ ತಿಂಗಳನ್ನು ಹಿಂದೂ ಪರಂಪರೆಯ ತಿಂಗಳು ಎಂದು ಘೋಷಿಸಲಾಗಿದೆ. ಟೊರೊಂಟೊ ಜಿಲ್ಲಾ ಶಾಲಾ ಆಡಳಿತ ಮಂಡಳಿಯು ಇದರ ಪರ ಮತ ಹಾಕಿತು. ಓಂ, ಬ್ರಹ್ಮಾಂಡದ ಧ್ವನಿ ಎಂಬ ಥೀಮ್ನೊಂದಿಗೆ ಈ ತಿಂಗಳನ್ನು ಗುರುತಿಸಲಾಗಿದೆ” ಎಂದು ಕಾರ್ಯಕ್ರಮದಲ್ಲಿ ಸದಸ್ಯರೊಬ್ಬರು ಹೇಳಿದ್ದಾರೆ.
ಟೊರೊಂಟೊಗೆ ಭಾರತದ ಕಾನ್ಸುಲ್ ಜನರಲ್ ಅಪೂರ್ವ ಶ್ರೀವಾಸ್ತವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಎಲ್ಲಾ ಸಮುದಾಯದ ಸದಸ್ಯರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.
ಒಂಟಾರಿಯೊದ ಹಣಕಾಸು ಸಚಿವ ಪೀಟರ್ ಬೆಥ್ಲೆನ್ಫಾಲ್ವಿ ಅವರು ಒಂಟಾರಿಯೊದ ಪ್ರೀಮಿಯರ್ ಸಂದೇಶವನ್ನು ಹಿಂದೂ ಫೋರಮ್ ಕೆನಡಾಕ್ಕೆ ಪ್ರಸ್ತುತಪಡಿಸಿದರು.
“ನಾವು ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವಾಗ ಹಿಂದೂ ಕೆನಡಿಯನ್ನರು ದೇಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಬಹುಸಂಸ್ಕೃತಿಯ ಸಮುದಾಯಗಳು ಮತ್ತು ಸಂಸ್ಥೆಗಳು ಕೋವಿಡ್-19 ಅನ್ನು ಸೋಲಿಸುವಲ್ಲಿ ಉತ್ತಮ ಪಾತ್ರವನ್ನು ವಹಿಸಿವೆ” ಎಂದು ಅವರು ಹೇಳಿದರು.
ಸುಮಾರು 200ಕ್ಕೂ ಹೆಚ್ಚು ಸಮುದಾಯದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕರೋನವೈರಸ್ ಪ್ರೋಟೋಕಾಲ್ ಅನುಸರಿಸಿ ಎರಡು ಗಂಟೆಗಳ ಕಾಲ “ಭಜನೆ” ಮತ್ತು ಸಾಂಸ್ಕೃತಿಕ ನೃತ್ಯಗಳ ಪ್ರದರ್ಶನ ನಡೆಸಲಾಗಿದೆ.
ಸ್ಥಳೀಯ ಗುರುದ್ವಾರದ ಸಿಖ್ ನಾಯಕರೊಂದಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಪ್ರಾಂತೀಯ ಸಂಸತ್ತಿನ ಸದಸ್ಯರು (ಎಂಪಿಪಿಗಳು), ಉಪ ಮೇಯರ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದೂ ಪರಂಪರೆ ತಿಂಗಳ ಆಚರಣೆಯ ಮಧ್ಯಾಹ್ನದ ಭೋಜನವನ್ನು ಗುರುದ್ವಾರಗಳಿಂದ ಆಯೋಜಿಸಲಾಗಿತ್ತು.
November is #HinduHeritageMonth!
I was happy to attend the celebration at Devi Mandir and present greetings on behalf of Premier FordNation.
Hindu Ontarian’s have been vital contributors to our provinces prosperity and economic recovery! pic.twitter.com/NPf0NiCrW5
— Peter Bethlenfalvy (@PBethlenfalvy) October 31, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.