ನವದೆಹಲಿ: ಭಾರತೀಯ ಸೇನೆ ಇಂದು 75ನೇ ಇನ್ಫಾಂಟ್ರಿ ಡೇ ಅನ್ನು ಆಚರಿಸುತ್ತಿದೆ.
ಕಾಶ್ಮೀರ ಕಣಿವೆಯಲ್ಲಿ ಅಕ್ಟೋಬರ್ 27, 1947 ರಂದು ಭಾರತೀಯ ಸೇನೆಯು ಭಾರತದ ನೆಲದ ಮೇಲೆ ನಡೆದ ಮೊದಲ ದಾಳಿಯನ್ನು ಹಿಮ್ಮೆಟ್ಟಿಸಿದ ಸ್ವತಂತ್ರ ಭಾರತದ ಮೊದಲ ಮಿಲಿಟರಿ ಘಟನೆಯ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸಿಖ್ ರೆಜಿಮೆಂಟ್ನ ಮೊದಲ ಬೆಟಾಲಿಯನ್ನ ಸಿಬ್ಬಂದಿ ಈ ವಿಜಯವನ್ನು ಸಾಧಿಸಿದರು.
ಇನ್ಫಾಂಟ್ರಿಯ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಎ.ಕೆ.ಸಮಂತರಾ ಅವರು ಈ ಸಂದರ್ಭದಲ್ಲಿ ಮಾತನಾಡಿ, ಇನ್ಫಾಂಟ್ರಿ ಸೈನಿಕರು ತಮ್ಮ ಕರ್ತವ್ಯ ಮತ್ತು ವೃತ್ತಿಪರತೆಗಾಗಿ ನಿಸ್ವಾರ್ಥ ಸಮರ್ಪಣೆ ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ವಿರೋಧಿಗಳ ದುಷ್ಕೃತ್ಯಗಳನ್ನು ತಡೆಯುವಲ್ಲಿ ಇನ್ಫಾಂಟ್ರಿ ಪಡೆಗಳ ಅಮೂಲ್ಯ ಕೊಡುಗೆಗಳನ್ನು ಅವರು ಶ್ಲಾಘಿಸಿದರು.
General MM Naravane #COAS and all Ranks of #IndianArmy convey best wishes to all Ranks, Veterans, Veer Naris and families of #Infantry on the occasion of 75th #InfantryDay.#IndianArmy#StrongAndCapable pic.twitter.com/wg9k8khMsa
— ADG PI – INDIAN ARMY (@adgpi) October 27, 2021
ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿ, “ಇನ್ಫಾಂಟ್ರಿ ದಿನದಂದು ನಮ್ಮ ಧೀರ ಇನ್ಫಾಂಟ್ರಿ ಸಿಬ್ಬಂದಿಗಳಿಗೆ ಶುಭಾಶಯಗಳು. ಅವರು ಅಸಾಧಾರಣ ಧೈರ್ಯ ಮತ್ತು ಶೌರ್ಯದ ಪ್ರತಿರೂಪವಾಗಿದ್ದಾರೆ. ದೇಶ ಸೇವೆ ಮಾಡುವಲ್ಲಿ ಅವರ ಸೇವೆ ಮತ್ತು ತ್ಯಾಗಕ್ಕೆ ರಾಷ್ಟ್ರ ಗೌರವ ಸಲ್ಲಿಸುತ್ತದೆ” ಎಂದಿದ್ದಾರೆ.
Greetings and warm wishes to our brave Infantrymen on the Infantry Day. They are the epitome of unwavering courage and valour. The nation salutes their service and sacrifice while serving the country.
— Rajnath Singh (@rajnathsingh) October 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.