ನವದೆಹಲಿ: ಕೆನಡಾದ ನೂತನ ರಕ್ಷಣೆ ಸಚಿವೆಯಾಗಿ ಭಾರತೀಯ ಮೂಲದ ಅನಿತಾ ಆನಂದ್ ಅವರು ನೇಮಕವಾಗಿದ್ದಾರೆ.
ಭಾರತೀಯ ಮೂಲದ ಕೆನಡಾ ರಾಜಕಾರಣಿ ಅನಿತಾ ಆನಂದ್ ಅವರನ್ನು ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಸಂಪುಟ ಪುನರ್ ರಚನೆಯಲ್ಲಿ ಹೊಸ ರಕ್ಷಣಾ ಸಚಿವರಾಗಿ ನಿನ್ನೆ ನೇಮಕ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಟ್ರುಡೋ ಅವರ ಲಿಬರಲ್ ಪಕ್ಷವು ಚುನಾವಣೆಗಳಲ್ಲಿ ಅಧಿಕಾರಕ್ಕೆ ಮರಳಿದ ಒಂದು ತಿಂಗಳ ನಂತರ ಮತ್ತು ಪ್ರಮುಖ ಮಿಲಿಟರಿ ಸುಧಾರಣೆಗಳ ಬೇಡಿಕೆಗಳ ನಡುವೆ ಅನಿತಾ ಆನಂದ್ ಅವರನ್ನು ರಕ್ಷಣಾ ಸಚಿವಯಾಗಿ ನೇಮಕ ಮಾಡಲಾಗಿದೆ.
ಅನಿತಾ ಆನಂದ್ ಅವರು ಕೆನಡಾದ ದೀರ್ಘಾವಧಿಯ ರಕ್ಷಣಾ ಸಚಿವ ಭಾರತೀಯ ಮೂಲದ ಹರ್ಜಿತ್ ಸಜ್ಜನ್ ಅವರ ಸ್ಥಾನಕ್ಕೆ ನೇಮಕವಾಗಿದ್ದಾರೆ.
ಹೊಸ ಸಂಪುಟವು ಲಿಂಗ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಮತ್ತು 38 ಸದಸ್ಯರನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಅನಿತಾ ಆನಂದ್ ಅವರು ಕಾರ್ಪೊರೇಟ್ ವಕೀಲರಾಗಿ ಆಳವಾದ ಹಿನ್ನೆಲೆಯನ್ನು ಹೊಂದಿದ್ದಾರೆ ಮತ್ತು ಕಾರ್ಪೊರೇಟ್ ಆಡಳಿತದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.