ನವದೆಹಲಿ: ಕೇಂದ್ರ ಜವಳಿ ಸಚಿವಾಲಯವು ಮೂಲಸೌಕರ್ಯ ಯೋಜನೆಗಳಲ್ಲಿ ಜಿಯೋಟೆಕ್ಸ್ಟೈಲ್ಗಳ ಅನ್ವಯಕ್ಕೆ ಸಂಬಂಧಿಸಿದ ವಿನ್ಯಾಸ ಮತ್ತು ಕಮಿಷನಿಂಗ್ ತಾಂತ್ರಿಕ ಸಿಬ್ಬಂದಿಯ ಕೌಶಲ್ಯದ ಕುರಿತ ಪ್ರಾಯೋಗಿಕ ಯೋಜನೆಯನ್ನು ಅನುಮೋದಿಸಿದೆ.
ಈ ಯೋಜನೆಯನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್, ಮದ್ರಾಸ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕಿ ಏಕಕಾಲದಲ್ಲಿ ನಡೆಸಲಾಗುತ್ತದೆ.
ಎಂಜಿನಿಯರಿಂಗ್ಗೆ ಸಂಬಂಧಪಟ್ಟ ಕ್ಷೇತ್ರಗಳ ಸಮನ್ವಯ ಅಧ್ಯಾಪಕರು ಇತರ ಸಂಬಂಧಪಟ್ಟ ಕೇಂದ್ರಗಳೊಂದಿಗೆ ಸಮಾಲೋಚಿಸಿ ವಿಶೇಷ ಕೋರ್ಸ್ಗಳ ಅನುಷ್ಠಾನವನ್ನು ನೋಡಿಕೊಳ್ಳುತ್ತಾರೆ.
ಜವಳಿ ಸಚಿವಾಲಯವು ಈ ಕೋರ್ಸ್ಗಳನ್ನು ನಡೆಸಲು ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಸಮನ್ವಯಗೊಳಿಸುತ್ತದೆ. ಒಂದು ಬ್ಯಾಚ್ ಕನಿಷ್ಠ 75 ರಿಂದ ಗರಿಷ್ಠ 100 ಅಭ್ಯರ್ಥಿಗಳನ್ನು ಒಳಗೊಂಡಿರುತ್ತದೆ ಮತ್ತು ಪ್ರಾಯೋಗಿಕ ಹಂತದಲ್ಲಿ, ಈ ಮೂರು ಸಂಸ್ಥೆಗಳಲ್ಲಿ ಪ್ರತಿಯೊಂದಕ್ಕೂ ಎರಡು ಬ್ಯಾಚ್ಗಳನ್ನು ನಿಗದಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.