ಗುವಾಹಟಿ: ಭಾರತ ಸ್ವಾತಂತ್ರ್ಯ ಪಡೆದ 75 ವರ್ಷಗಳ ನಂತರ, ಈಶಾನ್ಯ ಪ್ರದೇಶವು ತನ್ನ ಮೊದಲ ಎಲೆಕ್ಟ್ರಿಕ್ ಎಂಜಿನ್ ಪ್ರಯಾಣಿಕ ರೈಲನ್ನು ಪಡೆದುಕೊಂಡಿದೆ.
ಭಾರತೀಯ ರೈಲ್ವೆಯ ಮತ್ತೊಂದು ಮೈಲಿಗಲ್ಲಿನ ಸಾಧನೆ ಇದಾಗಿದ್ದು, ಎಲೆಕ್ಟ್ರಿಕ್ ಲೋಕೋಮೋಟಿವ್ನ ಮೊದಲ ಪ್ಯಾಸೆಂಜರ್ ರೈಲು ಶುಕ್ರವಾರ ಗುವಾಹಟಿಯ ಕಾಮಾಖ್ಯ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದೆ.
ಈಶಾನ್ಯ ಫ್ರಾಂಟಿಯರ್ ರೈಲ್ವೆ ಈ ಬಗ್ಗೆ ಟ್ವೀಟ್ ಮಾಡಿದ್ದು, “ಬ್ರಹ್ಮಪುತ್ರ ಮೇಲ್ ಇಂದು ದೆಹಲಿಯಿಂದ ಕಾಮಾಖ್ಯಕ್ಕೆ 2000 ಕಿಲೋಮೀಟರ್ಗಿಂತಲೂ ಹೆಚ್ಚು ವಿದ್ಯುದ್ದೀಕೃತ ಪ್ರದೇಶದ ಮೂಲಕ ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದೆ. ಈಶಾನ್ಯ ತಲುಪಿದ ಮೊದಲ ಪ್ರಯಾಣಿಕ ಎಲೆಕ್ಟ್ರಿಕ್ ರೈಲು ಇದಾಗಿದೆ. ಡಿಎನ್ ಬ್ರಹ್ಮಪುತ್ರ ಮೇಲ್ ಕೂಡ ಕಾಮಾಖ್ಯದಿಂದ ದೆಹಲಿಗೆ ಹೊರಟಿದೆ. ಇದು ಹೊಸ ಯುಗದ ಆರಂಭ” ಎಂದಿದೆ.
ಈ ತಿಂಗಳ ಆರಂಭದಲ್ಲಿ, ಕಟಿಹಾರ್ನಿಂದ ಗುವಾಹಟಿಯವರೆಗಿನ ಹೈ-ಡೆನ್ಸಿಟಿ ನೆಟ್ವರ್ಕ್ನ (HDN) ಒಟ್ಟು 649 ರೂಟ್ ಕಿಲೋಮೀಟರ್ (RKM)/ 1294 ಟನ್ ಕಿಲೋಮೀಟರ್ (TKM) ನ ವಿದ್ಯುದೀಕರಣ ಕಾರ್ಯವನ್ನು NFR ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿತ್ತು.
ಗುರುವಾರ ಮೊದಲ ಎಲೆಕ್ಟ್ರಿಕ್ ಲೋಕೋಮೋಟಿವ್ ಗೂಡ್ಸ್ ರೈಲು ಗುವಾಹಟಿ ಬಳಿಯ ಕಾಮಾಖ್ಯ ನಿಲ್ದಾಣಕ್ಕೆ ಆಗಮಿಸಿದೆ. ದಿಬ್ರುಗಡ್ ವರೆಗಿನ ರೈಲು ಹಳಿಗಳ ವಿದ್ಯುದೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವರದಿಗಳು ತಿಳಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಈಶಾನ್ಯ ರಾಜ್ಯದ ಎಲ್ಲಾ ರಾಜ್ಯಗಳ ರಾಜಧಾನಿಗಳನ್ನು ರೈಲು ಸಂಪರ್ಕದ ಮೂಲಕ ಸಂಪರ್ಕಿಸುವ ದೂರದೃಷ್ಟಿ ಹೊಂದಿದ್ದಾರೆ. ರೈಲ್ವೇ ಸಚಿವಾಲಯವು 2024 ರ ವೇಳೆಗೆ ಈಶಾನ್ಯದ ಎಲ್ಲಾ ರಾಜ್ಯಗಳನ್ನು ರೈಲ್ವೇ ಸಂಪರ್ಕದ ಮೂಲಕ ಸಂಪರ್ಕಿಸಲು ಕೆಲಸ ಮಾಡುತ್ತಿದೆ. ಗುವಾಹಟಿಗೆ ಎಲೆಕ್ಟ್ರಿಕ್ ಇಂಜಿನ್ಗಳನ್ನು ಓಡಿಸುವ ಉಪಕ್ರಮವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.