ನವದೆಹಲಿ: ಬಾಂಗ್ಲಾದೇಶದಲ್ಲಿ ಜಿಹಾದಿಗಳು ನಡೆಸುತ್ತಿರುವ ಹಿಂದೂಗಳ ನಿರಂತರ ನರಮೇಧವನ್ನು ತಡೆಯಲು ವಿಶ್ವಸಂಸ್ಥೆಯು ಶಾಂತಿ ಪಾಲನಾ ಪಡೆಗಳನ್ನು ಕಳುಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ವಿಎಚ್ಪಿಯ ಕೇಂದ್ರ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಅವರು ಮಾತನಾಡಿ, ಮೂಲಭೂತವಾದಿ ಇಸ್ಲಾಮಿಕ್ ಜಿಹಾದಿಗಳ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಾಜಿಗಳ ಕ್ರೂರತೆಯೊಂದಿಗೆ ಮಾತ್ರ ಹೋಲಿಸಬಹುದು ಎಂದು ಹೇಳಿದ್ದಾರೆ. ಹಿಂದೂಗಳ ಮೇಲಿನ ಕ್ರೂರ ದೌರ್ಜನ್ಯಗಳ ಸರಣಿ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಯುಎನ್ಒ ಈ ವಿಷಯದಲ್ಲಿ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಬಾಂಗ್ಲಾದ ಬಾಧಿತ ಅಲ್ಪಸಂಖ್ಯಾತ ಸ್ಥಳೀಯ ಹಿಂದೂಗಳ ರಕ್ಷಣೆಗೆ ವಿಳಂಬವಿಲ್ಲದೆ ತನ್ನ ಶಾಂತಿ ಪಾಲನಾ ಪಡೆಯನ್ನು ಕಳುಹಿಸಬೇಕು. ಹಿಂದೂಗಳ ಮೇಲಿನ ಕ್ರೂರ ದೌರ್ಜನ್ಯಗಳನ್ನು ಖಂಡಿಸಿ, ಪ್ರಧಾನ ಮಂತ್ರಿ ಶೇಖ್ ಹಸೀನಾ ತನ್ನ ರಾಜ ಧರ್ಮವನ್ನು ಅನುಸರಿಸಬೇಕು, ತನ್ನ ಅಲ್ಪಸಂಖ್ಯಾತ ಹಿಂದೂ ಸಮಾಜದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮಾನವ ವಿರೋಧಿಗಳನ್ನು ಶಿಕ್ಷಿಸಬೇಕು ಎಂದು ವಿಎಚ್ಪಿ ಆಗ್ರಹಿಸಿದೆ.
ಯುಎನ್ ಮತ್ತು ಎಲ್ಲಾ ಮಾನವ ಹಕ್ಕುಗಳ ಸಂಘಟನೆಗಳು ದುರ್ಬಲಗೊಂಡಿವೆ ಎಂದು ಹೇಳಿದ ಅವರು, ಇಸ್ಲಾಮಿಕ್ ಮೂಲಭೂತವಾದಿಗಳು ಬಾಂಗ್ಲಾದೇಶವನ್ನು ಸಂಪೂರ್ಣವಾಗಿ ಹಿಂದೂಗಳಿಲ್ಲದ ದೇಶವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಬಾಂಗ್ಲಾದೇಶ ಸರ್ಕಾರ ಮೂಕ ಪ್ರೇಕ್ಷಕನಾಗಿ ಮಾರ್ಪಟ್ಟಿದೆ. ಉಗ್ರ ಜಿಹಾದಿಗಳನ್ನು ನಿಯಂತ್ರಿಸುವ ಬದಲು, ಬಾಂಗ್ಲಾದೇಶದ ಮುಸ್ಲಿಮರನ್ನು ಕೆರಳಿಸುವಂತಹ ಯಾವುದೇ ಘಟನೆ ಭಾರತದಲ್ಲಿ ಸಂಭವಿಸಬಾರದು ಎಂದು ಬಾಂಗ್ಲಾದೇಶದ ಪ್ರಧಾನಿ ಭಾರತ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ. ಶೇಖ್ ಹಸೀನಾದ ಈ ಹೇಳಿಕೆಯ ನಂತರಮುಸ್ಲಿಂ ಮೂಲಭೂತವಾದಿಗಳು ಹೆಚ್ಚುಕೆರಳಿದ್ದಾರೆ ಮತ್ತು ಹಿಂದೂಗಳ ಮೇಲಿನ ಕ್ರೂರ ದೌರ್ಜನ್ಯಗಳು ಹೆಚ್ಚಾದವು. ದೌರ್ಜನ್ಯಗಳ ಸರಣಿ ಇನ್ನೂ ನಿಲ್ಲುವ ಯಾವುದೇ ಲಕ್ಷಣವನ್ನು ತೋರಿಸುತ್ತಿಲ್ಲ ಎಂದಿದ್ದಾರೆ.
ಬಾಂಗ್ಲಾದೇಶವು ಇಸ್ಲಾಂ ಅನ್ನು ರಾಜ್ಯ ಧರ್ಮವಾಗಿ ಘೋಷಿಸಿದ ಇಸ್ಲಾಮಿಕ್ ದೇಶವಾಗಿದೆ, ಅದಕ್ಕಾಗಿಯೇ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಂತೆಯೇ, ಬಾಂಗ್ಲಾದೇಶದಲ್ಲಿ ಮೊದಲಿನಿಂದಲೂ ಹಿಂದೂಗಳ ಮೇಲೆ ಘೋರ ದೌರ್ಜನ್ಯಗಳು ನಡೆಯುತ್ತಾ ಬಂದಿವೆ, ಆದರೆ ಪ್ರಸ್ತುತ ಬೆಳವಣಿಗೆಗಳು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕಳೆದ 10 ದಿನಗಳಲ್ಲಿ ಬರೋಬ್ಬರಿ 150 ಕ್ಕಿಂತಲೂ ಹೆಚ್ಚು ದುರ್ಗಾ ಪೂಜೆಯ ಪೆಂಡಲ್ಗಳನ್ನು ನಾಶಪಡಿಸಲಾಗಿದೆ ಮತ್ತು 362 ಕ್ಕೂ ಹೆಚ್ಚು ಮೂರ್ತಿಗಳನ್ನು ಕೆಡವಲಾಯಿತು. ಹಿಂದೂಗಳ ಸಾವಿರಾರು ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ಮತ್ತು ಲೂಟಿ ಮಾಡಲಾಗಿದೆ. 1,000 ಕ್ಕೂ ಹೆಚ್ಚು ಹಿಂದುಗಳು ಗಾಯಗೊಂಡಿದ್ದಾರೆ ಮತ್ತು ಇಲ್ಲಿಯವರೆಗೆ 10 ಹಿಂದೂಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅನೇಕ ಹಿಂದೂ ಮಹಿಳೆಯರನ್ನು ಕ್ರೂರವಾಗಿ ಅತ್ಯಾಚಾರ ಮಾಡಲಾಗಿದೆ. ಮೂರು ಇಸ್ಕಾನ್ ದೇವಸ್ಥಾನಗಳು, ರಾಮಕೃಷ್ಣ ಮಿಷನ್ ಆಶ್ರಮಗಳು, ರಾಮ್ ಠಾಕೂರ್ ಆಶ್ರಮ ಸೇರಿದಂತೆ 50 ಕ್ಕೂ ಹೆಚ್ಚು ದೇವಸ್ಥಾನಗಳು ನಾಶವಾಗಿವೆ. ಇಸ್ಕಾನ್ನ ಇಬ್ಬರು ಸಂತರು ಮತ್ತು ಚೌಮೋಹಿಣಿ ದೇವಸ್ಥಾನದ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಸ್ಕಾನ್ ದೇವಾಲಯದ ಕೊಳದಲ್ಲಿ ನಿನ್ನೆ ಮತ್ತೊಬ್ಬ ಅರ್ಚಕರ ಶವ ಪತ್ತೆಯಾಗಿದೆ. ಹಲವು ಜಿಲ್ಲೆಗಳಿಂದ ಅಂತರ್ಜಾಲ ನಿರ್ಬಂಧಗಳಿಂದಾಗಿ ಭಾಗಶಃ ಸುದ್ದಿಗಳು ಸಿಕ್ಕಿವೆ. ವಾಸ್ತವವು ಇದಕ್ಕಿಂತ ಕೆಟ್ಟದಾಗಿದೆ ಎನ್ನಲಾಗಿದೆ.
ಹಿಂದೂಗಳ ಮೇಲೆ ನಡೆಯುತ್ತಿರುವ ಈ ಅಮಾನವೀಯ ದೌರ್ಜನ್ಯವನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದಿರುವ ಡಾ ಜೈನ್, ಇಂದು ಅಕ್ಟೋಬರ್ 19 ರಂದು ಕೋಲ್ಕತ್ತಾದಲ್ಲಿ ಭಾರೀ ಪ್ರತಿಭಟನೆ ನಡೆಸಲಾಗುತ್ತಿದೆ. ಅಕ್ಟೋಬರ್ 20 ರಂದು ನವದೆಹಲಿಯ ಬಾಂಗ್ಲಾದೇಶ ಹೈ ಕಮಿಷನ್ ಮುಂದೆ ದೊಡ್ಡ ಪ್ರತಿಭಟನೆ ನಡೆಯಲಿದೆ. ಇದರೊಂದಿಗೆ, ಭಾರತದಾದ್ಯಂತದ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.