ನವದೆಹಲಿ: 2030 ರ ವೇಳೆಗೆ ಭಾರತವು ಪ್ರತಿ ವರ್ಷ ಸರಿಸುಮಾರು ಒಂದು ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಗುರಿಯಾಗಿಸಿಕೊಂಡಿದೆ.
ದುಬೈನಲ್ಲಿ ನಡೆದ ಎಕ್ಸ್ಪೋ 2020 ಹವಾಮಾನ ಮತ್ತು ಜೀವವೈವಿಧ್ಯ ಸಪ್ತಾಹದಲ್ಲಿ ಈ ಮಾಹಿತಿಯನ್ನು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಭಗವಂತ ಖೂಬಾ ಹಂಚಿಕೊಂಡಿದ್ದಾರೆ.
ಇಂಧನ ವಲಯವು ಪ್ರಪಂಚದಾದ್ಯಂತ ತೀವ್ರ ಪರಿವರ್ತನೆಗೆ ಒಳಗಾಗಲಿದ್ದು, ಭವಿಷ್ಯವು ನವೀಕರಿಸಬಹುದಾದ ಶಕ್ತಿಗೆ ಸೇರಿದ್ದಾಗಿದೆ ಎಂದು ಖುಬಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2015 ರಲ್ಲಿ ಘೋಷಿಸಿದಂತೆ 2022 ರ ವೇಳೆಗೆ 175 GW ಸ್ಥಾಪಿತ ನವೀಕರಿಸಬಹುದಾದ ಇಂಧನದ ಸಾಮರ್ಥ್ಯವನ್ನು ಸಾಧಿಸುವ ಗುರಿ ಹೊಂದಲಾಗಿದೆ, ಭಾರತವು 2021 ರಲ್ಲಿ 100 GW ಮೈಲಿಗಲ್ಲನ್ನು ಸಾಧಿಸಿದೆ ಎಂದು ಅವರು ಹೇಳಿದರು.
ಪ್ರಸ್ತುತ, ನವೀಕರಿಸಬಹುದಾದ ಶಕ್ತಿಯ ವಿಶಾಲ ಸಾಮರ್ಥ್ಯದ ಒಂದು ಭಾಗವನ್ನು ಮಾತ್ರ ಭಾರತವು ಬಳಸಿಕೊಂಡಿದೆ ಮತ್ತು 2030 ರ ವೇಳೆಗೆ ಭಾರತವು 450 GWಗೆ ನವೀಕರಿಸಬಹುದಾದ ಇಂಧನದ ಸ್ಥಾಪಿತ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದ್ದಾರೆ.
ಖುಬಾ ಅವರು ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಯ ಪ್ರಯೋಜನಗಳನ್ನು ಪುನರುಚ್ಚರಿಸಿದ್ದಾರೆ ಮತ್ತು ಸುಲಲಿತ ವ್ಯವಹಾರವನ್ನು ಖಾತ್ರಿಪಡಿಸುವುದು ಭಾರತದ ಅತ್ಯಂತ ಆದ್ಯತೆಯಾಗಿದೆ ಎಂದು ತಿಳಿಸಿದರು.
“ದೇಶೀಯ ಮತ್ತು ವಿದೇಶಿ ಹೂಡಿಕೆದಾರರ ಕೈಹಿಡಿಯಲು ಮತ್ತು ಅವರ ಅನುಕೂಲಕ್ಕಾಗಿ ನಾವು ಎಲ್ಲಾ ಸಚಿವಾಲಯಗಳಲ್ಲಿ ಮೀಸಲಾದ ಪ್ರಾಜೆಕ್ಟ್ ಡೆವಲಪ್ಮೆಂಟ್ ಸೆಲ್ (ಪಿಡಿಸಿ) ಮತ್ತು ಎಫ್ಡಿಐ ಸೆಲ್ ಅನ್ನು ಸ್ಥಾಪಿಸಿದ್ದೇವೆ. ನೇರ ಸ್ವಯಂಚಾಲಿತ ಮಾರ್ಗದ ಮೂಲಕ 100 ಪ್ರತಿಶತ ಎಫ್ಡಿಐಗೆ ಅನುಮತಿ ನೀಡಲಾಗಿದೆ” ಎಂದು ಅವರು ಒತ್ತಿ ಹೇಳಿದ್ದಾರೆ.
“ಭಾರತ ಈಗ ತನ್ನ ಸೋಲಾರ್ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ. ಭಾರತ ಸರ್ಕಾರವು ಇತ್ತೀಚೆಗೆ ಹೆಚ್ಚಿನ ದಕ್ಷತೆಯ ಸೋಲಾರ್ ಪಿವಿ ಮಾಡ್ಯೂಲ್ಗಳ ತಯಾರಿಕೆಗಾಗಿ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ ಯೋಜನೆಯನ್ನು ಆರಂಭಿಸಿದೆ. ನಾವು ಮುಂದಿನ ಐದು ವರ್ಷಗಳಲ್ಲಿ 10 ಗಿಗಾವ್ಯಾಟ್ ಸೋಲಾರ್ ಪಿವಿ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ನಿರೀಕ್ಷೆ ಹೊಂದಿದ್ದೇವೆ “ಎಂದು ಅವರು ಹೇಳಿದರು.
“ಹಸಿರು ಹೈಡ್ರೋಜನ್ ನಮ್ಮ ಆರ್ಥಿಕತೆಯನ್ನು ಇಂಗಾಲ ಮುಕ್ತ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಸಿರು ಹೈಡ್ರೋಜನ್ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಭಾರತವು ರಾಷ್ಟ್ರೀಯ ಹಸಿರು ಜಲಜನಕ ಶಕ್ತಿ ಮಿಷನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.
ಭಾರತವು 2030 ರ ವೇಳೆಗೆ ಸುಮಾರು 1 ಮಿಲಿಯನ್ ಟನ್ಗಳ ವಾರ್ಷಿಕ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಹೇಳಿದರು.
ಭಾರತದ ಮಹತ್ವಾಕಾಂಕ್ಷೆಯ ಗುರಿಯಾದ 450 GW 2030 ರ ವೇಳೆಗೆ 221 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಅವಕಾಶಗಳನ್ನು ತೆರೆಯುತ್ತದೆ ಎಂದು ಖುಬಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.