ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಟಾಟಾ ಸನ್ಸ್ನ ಒಡೆತನದ ಅಂಗಸಂಸ್ಥೆ ಟಲಾಸ್ ಪ್ರೈವೇಟ್ ಲಿಮಿಟೆಡ್ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಬಿಡ್ ಅನ್ನು ಗೆದ್ದಿದೆ ಎಂದು ವಿಮಾನಯಾನ ಸಚಿವಾಲಯ ಮತ್ತು ಡಿಐಪಿಎಎಂ ಕಾರ್ಯದರ್ಶಿ ಶುಕ್ರವಾರ ಘೋಷಿಸಿದ್ದಾರೆ.
ಒಟ್ಟು ಏಳು ಬಿಡ್ಗಳನ್ನು ಸ್ವೀಕರಿಸಲಾಗಿತ್ತು, ಅದರಲ್ಲಿ ಐದು ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದವು. ಟಾಟಾ ಸನ್ಸ್ ಮತ್ತು ಸ್ಪೈಸ್ ಜೆಟ್ ನ ಪ್ರವರ್ತಕರಾದ ಅಜಯ್ ಸಿಂಗ್ ಅವರ ಬಿಡ್ ಕೊನೆಗೆ ಉಳಿದಿದ್ದವು. ಟಾಟಾ ಸನ್ಸ್ ಬಿಡ್ ಮೊತ್ತವು 18,000 ಕೋಟಿ ರೂಪಾಯಿಗಳು ಮತ್ತು ಇದು ಏರ್ ಇಂಡಿಯಾ ಸಾಲದ 15,300 ಕೋಟಿ ರೂಪಾಯಿಗಳನ್ನು ತೀರಿಸಲಿದೆ. ಪ್ರಸ್ತುತ ಅದರ ಸಾಲ 61,562 ಕೋಟಿಗಳಷ್ಟಿದೆ. ಉಳಿದ 46,262 ಕೋಟಿ ರೂಪಾಯಿ ಸಾಲವನ್ನು ಎಐಎಚ್ಎಲ್ ಕಂಪನಿಯು ಪಾವತಿಸಲಿದೆ, ಇದು ಸರ್ಕಾರದ ಒಡೆತನದಲ್ಲಿ ಮುಂದುವರಿಯುತ್ತದೆ.
ಟಾಟಾ ಸನ್ಸ್ನ ವಿಜೇತ ಬಿಡ್ ಎಲ್ಲಾ ಸ್ವತ್ತುಗಳ ವರ್ಗಾವಣೆಯನ್ನು ಒಳಗೊಂಡಿರುತ್ತದೆ, ಎಐಎಚ್ಎಲ್ 14,718 ಕೋಟಿ ರೂಪಾಯಿ ಮೌಲ್ಯದ ಭೂಮಿ ಮತ್ತು ಕಟ್ಟಡದ ಆಸ್ತಿಯನ್ನು ಉಳಿಸಿಕೊಳ್ಳುತ್ತದೆ.
ಸಾಲ್ಟ್ ರಿಂದ ಸಾಫ್ಟ್ ವೇರ್ವರೆಗಿನ ಕಂಪನಿಯಾದ ಟಾಟಾ ರೂ 18,000 ಕೋಟಿಗಳ ಗೆಲುವಿನ ಬಿಡ್ ಅನ್ನು ಮಾಡುವ ಮೂಲಕ ಏರ್ ಇಂಡಿಯಾವನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟ 65 ವರ್ಷಗಳ ನಂತರ ಪುನಃ ಸ್ವಾಧೀನಪಡಿಸಿಕೊಂಡಿದೆ.
Talace Pvt Ltd of Tata Sons is the winning bidder at Rs 18,000 crores. The transaction is expected to close by the end of December 2021, says Tuhin Kant Pandey, Secretary, DIPAM pic.twitter.com/SvSKj3pVNw
— ANI (@ANI) October 8, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.