ನವದೆಹಲಿ: ಯೆಮೆನ್ನಲ್ಲಿನ ಭಾರತೀಯರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮಂಗಳವಾರ ಸುಮಾರು 1052 ಭಾರತೀಯರನ್ನು ಹೊತ್ತ ನೌಕೆ ಮುಂಬಯಿಗೆ ಬಂದು ತಲುಪಿದೆ. ಇವರಲ್ಲಿ 574 ಮಂದಿಯನ್ನು ಯೆಮೆನ್ ರಾಜಧಾನಿ ಸನಾದಿಂದ ಮತ್ತು 479 ಮಂದಿಯನ್ನು ಅಲ್ ಹೋಡೀದದಿಂದ ರಕ್ಷಿಸಲಾಗಿದೆ. ಈ ಮೂಲಕ ಯೆಮೆನ್ಮಲ್ಲಿನ 4,೦೦೦ ಭಾರತೀಯರ ಪೈಕಿ 3,3೦೦ ಮಂದಿಯನ್ನು ಸುರಕ್ಷಿತವಾಗಿ ವಾಪಾಸ್ ಕರೆ ತರಲಾಗಿದೆ.
ಹಿಂಸಾಚಾರ ಯೆಮೆನ್ ಭಾರತೀಯರ ರಕ್ಷಣೆಗೆ ಕೇಂದ್ರ ಆರಂಭಿಸಿದ ‘ಆಪರೇಷನ್ ರಾಹತ್’ ಬಹುತೇಕ ಯಶಸ್ವಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಆಪರೇಶನ್ ಮುಕ್ತಾಯವಾಗಲಿದೆ. ಅಲ್ಲದೇ ಯುಎಸ್, ಫ್ರಾನ್ಸ್, ಜರ್ಮನಿ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಇತರ 26 ದೇಶಗಳು ಯೆಮೆನ್ನಲ್ಲಿನ ತನ್ನ ನಾಗರಿಕರ ರಕ್ಷಣೆಗೆ ಭಾರತದ ಸಹಕಾರವನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಾಚರಣೆಯ ವೇಳೆ ಭಾರತ ಸಾಕಷ್ಟು ಯೆಮೆನ್ ನಾಗರಿಕರನ್ನೂ ರಕ್ಷಣೆ ಮಾಡಿ ಅವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಿದೆ.
ಭಾರತೀಯರ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಭಾರತೀಯ ನೌಕಾ ಸೇನೆಯ ಶ್ರಮವನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಟ್ವಿಟರ್ ಮೂಲಕ ಸೇನೆಯ ಶ್ರಮವನ್ನು ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.