ಮಾನವ ಹಕ್ಕು ನಿರ್ವಹಣಾ ವರದಿ 2013ರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 7,200ಕ್ಕೂ ಅಧಿಕ ಮಕ್ಕಳು ಲೈಂಗಿಕ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇನ್ನೂ ಕೆಲವು ಘಟನೆಗಳು ವರದಿಯಾಗಿರುವುದಿಲ್ಲ. ಇವೆಲ್ಲದರ ಹೊರತಾಗಿಯೂ ನಮ್ಮ ಸುತ್ತಮುತ್ತಲಿನ ಪರಿಸರ ಮೌನವಾಗಿ ಉಳಿದಿದೆ. ಇನ್ನು ಪೋಷಕರು ಹಾಗೂ ಶಾಲಾ ಶಿಕ್ಷಕರು ಕೂಡ ತಮ್ಮ ಮಕ್ಕಳಲ್ಲಿ ಲೈಂಗಿನ ದೌರ್ಜನ್ಯ ವಿಚಾರದಲ್ಲಿ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಈ ಕುರಿತು ಅರಿವು ಮೂಡಿಸದಿದ್ದಲ್ಲಿ ಮಕ್ಕಳು ಕೂಡ ಇಂತಹ ಪರಿಸ್ಥಿತಿಗಳಲ್ಲಿ ಏನು ಮಾಡಬೇಕೆಂದು ತಿಳಿಯಲಾರದೆ ಸುಮ್ಮನಿರುತ್ತಾರೆ. ಭಯಪಡುತ್ತಾರೆ. ಆದರೆ ಸಂಶಯ ಬಂದಾಗ ನಾವು ಮೊದಲು ದೂಷಿಸುವುದು, ದೂರುವುದು ನಮ್ಮ ಮಕ್ಕಳನ್ನೇ ಹೊರತು ಬೇರೆಯವರನ್ನಲ್ಲ.
ಚೈಲ್ಡ್ಲೈನ್ ಇಂಡಿಯಾ ಇತ್ತೀಚೆಗೆ ಬಿಡುಗಡೆಗೊಳಿಸಿದ ’ಕೋಮಲ್’ ಆನಿಮೇಟೆಡ್ ಚಿತ್ರ ಅತ್ಯುತ್ತಮ ಶೈಕ್ಷಣಿಕ ಚಿತ್ರಕ್ಕಾಗಿ 2015ರ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ಈ ಹಿಂದೆ ಈ ಚಿತ್ರ ವೃತ್ತಿಪರ ಆನಿಮೇಟೆಡ್ ಕಿರುಚಿತ್ರ ಅಡಿಯಲ್ಲಿ ಎಫ್ಐಸಿಸಿಐ ಅತ್ಯುತ್ತಮ ಆನಿಮೇಟೆಡ್ ಫ್ರೇಮ್ ಪ್ರಶಸ್ತಿ, 2014 ಕೂಡ ಪಡೆದಿದೆ.
ಇದು ಮಕ್ಕಳ ಲೈಂಗಿಕ ದೌರ್ಜನ್ಯ ಕುರಿತು ಅತ್ಯಂತ ಸರಳ ರೀತಿಯಲ್ಲಿ ಉಲ್ಲೇಖಿಸುತ್ತದೆ. ಜೊತೆಗೆ ಮಕ್ಕಳು ತಮ್ಮನ್ನು ಯಾವ ರೀತಿ ನಿಂದನೆಯಿಂದ ರಕ್ಷಿಸಬೇಕು ಎಂಬ ಮಾಹಿತಿ ನೀಡುತ್ತದೆ. ಈ ಚಿತ್ರವು ಸುರಕ್ಷಿತ ಮತ್ತು ಅಸುರಕ್ಷಿತತೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ವೈಯಕ್ತಿಕ ಸುರಕ್ಷತೆ ಕುರಿತು ವಿವರಿಸುತ್ತದೆ.
ಈ ಚಿತ್ರವು ’ಕೋಮಲ್’ ಎಂಬ 7 ವರ್ಷದ ಬಾಲಕಿ ತನ್ನ ತಂದೆಯ ಸ್ನೇಹಿತನಿಂದ ನಿಂದನೆಗೆ ಒಳಗಾಗಿ, ತನ್ನ ತಾಯಿಗೆ ಈ ವಿಷಯವನ್ನು ತಿಳಿಸುವ ಮೂಲಕ ಅದನ್ನು ತಡೆಯುವಲ್ಲಿ ಸಫಲಳಾಗುವ ಕಥೆಯಾಗಿದೆ. ಬೇರೆಯವರಿಂದಾದ ತಪ್ಪನ್ನು ತಮ್ಮ ತಪ್ಪೆಂದು ಭಾವಿಸುವ ಮಕ್ಕಳ ತಪ್ಪು ಕಲ್ಪನೆ, ಹಾಗೂ ಇಂತಹ ಘಟನೆಗಳನ್ನು ತಮ್ಮ ನಂಬಿಗಸ್ಥರಲ್ಲಿ ವಿವರಿಸುವ ಮೂಲಕ ತಡೆಗಟ್ಟುವ ಪ್ರಯತ್ನ ಇದಾಗಿದೆ. ಮುಖ್ಯವಾಗಿ ಹೆಣ್ಣು ಮತ್ತು ಗಂಡು ಮಕ್ಕಳಲ್ಲಾಗುವ ನಿಂದನೆಯನ್ನು ಈ ಚಿತ್ರ ಬಿಂಬಿಸುತ್ತದೆ.
ಇದನ್ನು ಒಟ್ಟು ೧೨ ಪ್ರಾದೇಶಿಕ ಭಾಷೆಗಳಿಗೆ ಪರಿವರ್ತಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಅನುಮೋದನೆಯನ್ನು ಪಡೆದಿವೆ.
ಈ ಕಿರುಚಿತ್ರವನ್ನು ಚೈಲ್ಡ್ಲೈನ್ನ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.