ನವದೆಹಲಿ: ಪಾಕಿಸ್ಥಾನದ ಭೂಭಾಗದ ಒಳಗೆ ಪ್ರವೇಶಿಸಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗೆ ಇಂದು ಐದು ವರ್ಷ ಪೂರೈಸಿದೆ.
2016 ರಲ್ಲಿ ಪಾಕಿಸ್ತಾನ ಸೇನೆಯ ನೆರವಿನಿಂದ ಭಯೋತ್ಪಾದಕರು ಕಾಶ್ಮೀರದ ಒಳಗೆ ನುಗ್ಗಿ ಉರಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದರು. ಪಾಕಿಸ್ಥಾನ ಪ್ರಾಯೋಜಿತ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರು ಈ ಕೃತ್ಯ ಎಸಗಿದ್ದರು.
ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಈ ಮೂಲಕ ಪಾಕಿಸ್ತಾನದ ಭಯೋತ್ಪಾದನೆ ಕೃತ್ಯಕ್ಕೆ ದಿಟ್ಟ ಪ್ರತ್ಯುತ್ತರವನ್ನು ನೀಡಿತ್ತು.
2016ರ ಸೆಪ್ಟೆಂಬರ್ 29ರಂದು ಪಾಕಿಸ್ತಾನದ ಗಡಿ ಭಾಗದಲ್ಲಿ ನೆಲೆಯೂರಿದ್ದ ಭಯೋತ್ಪಾದಕರ ಶಿಬಿರಗಳನ್ನು ಸರ್ಜಿಕಲ್ ಸ್ಟ್ರೈಕ್ ನಡೆಸಿ ಭಾರತೀಯ ಸೇನೆಯ ಯೋಧರು ಧ್ವಂಸ ಮಾಡಿದರು. ಇದರಲ್ಲಿ ಸುಮಾರು 35 ರಿಂದ 70 ಉಗ್ರರು ಸತ್ತಿದ್ದಾರೆ ಎಂದು ಹೇಳಲಾಗಿದೆ.
ಭಾರತೀಯ ಸೇನೆಯ ಈ ಸಾಹಸಮಯ ಕಾರ್ಯಕ್ಕೆ ಐದು ವರ್ಷಗಳು ಪೂರೈಸಿದೆ. ಆದರೆ ಜಗತ್ತಿನೆದುರು ಮುಖಭಂಗ ಎದುರಿಸಿದರೂ ಪಾಕಿಸ್ತಾನ ಮಾತ್ರ ತನ್ನ ಕೃತ್ಯವನ್ನು ಇನ್ನೂ ಮುಂದುವರಿಸುತ್ತಲೇ ಇದೆ. ಇದಕ್ಕಾಗಿ ಅದು ಮುಂದೊಂದು ದಿನ ತಕ್ಕ ಬೆಲೆ ತರಬೇಕಾಗಿರುವುದು ಶತಸಿದ್ಧ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.