ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಇಂದು ಲಡಾಖ್ ಕಾರ್ಗಿಲ್ನ ಹಂಬಟಿಂಗ್ಲಾದಲ್ಲಿನ ವಿಶ್ವದ ಅತಿ ಎತ್ತರದ ರೇಡಿಯೋ ಕೇಂದ್ರದಲ್ಲಿ ಹೈ ಪವರ್ ಟ್ರಾನ್ಸ್ಮಿಟರ್ಗಳನ್ನು ಉದ್ಘಾಟಿಸಿದರು.
ಕಾರ್ಗಿಲ್ ಬಟಾಲಿಕ್ನ ಹಂಬಟಿಂಗ್ಲಾದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 13,300 ಅಡಿ ಎತ್ತರದಲ್ಲಿ ಆಲ್ ಇಂಡಿಯಾ ರೇಡಿಯೋ ಎಫ್ಎಂ ರೇಡಿಯೋ ಸ್ಟೇಷನ್ ಮತ್ತು ದೂರದರ್ಶನಗಳ ಎರಡು ಕಿಲೋವ್ಯಾಟ್ ಹೈ ಪವರ್ ಟ್ರಾನ್ಸ್ಮಿಟರ್ಗಳನ್ನು ಸಚಿವರು ಉದ್ಘಾಟಿಸಿದ್ದಾರೆ.
ಟ್ರಾನ್ಸ್ಮಿಟರ್ಗಳು ಈ ಪ್ರದೇಶದಲ್ಲಿ ಪ್ರಸರಣ ಮತ್ತು ತಲುಪುವಿಕೆಯ ವ್ಯಾಪ್ತಿಯನ್ನು ಸುಧಾರಿಸುತ್ತದೆ.
ಆಲ್ ಇಂಡಿಯಾ ರೇಡಿಯೋ ಪ್ರಿನ್ಸಿಪಲ್ ಡೈರೆಕ್ಟರ್ ಜನರಲ್ ಎನ್. ವೇಣುಧರ್ ರೆಡ್ಡಿ ಮತ್ತು ದೂರದರ್ಶನ ಡೈರೆಕ್ಟರ್ ಜನರಲ್ ಮಯಾಂಕ್ ಅಗರ್ವಾಲ್, ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ನಾಮ್ಗ್ಯಾಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮೊದಲು ಅನುರಾಗ್ ಠಾಕೂರ್ ಅವರು ಹಂಬಟಿಂಗ್ಲಾದಲ್ಲಿ ಹೈ ಪವರ್ ಟ್ರಾನ್ಸ್ಮಿಟರ್ಗಳು, ರಿಲೇ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ಪ್ರಸರಣ ಮತ್ತು ತಲುಪುವಿಕೆಯ ತಾಂತ್ರಿಕ ವಿಶೇಷಣಗಳ ಬಗ್ಗೆ ವಿಚಾರಿಸಿದರು.
हम्बोटिंग ला में डीडी के 10 KW ट्रांसमीटर का शुभारंभ करते श्री @ianuragthakur pic.twitter.com/EDna5wuDnS
— Office of Mr. Anurag Thakur (@Anurag_Office) September 25, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.