ಮೂರು ವರ್ಷಗಳ ಹಿಂದೆ ಈ ದಿನ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಪ್ರಧಾನ ಮಂತ್ರಿ ಜನ್ ಆರೋಗ್ಯ ಅಭಿಯಾನ್- ಆಯುಷ್ಮಾನ್ ಭಾರತ್ ಅನ್ನು ಆರಂಭಿಸಿದರು. ಇದನ್ನು ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಅಥವಾ ಮೋದಿಕೇರ್ ಎಂದೂ ಕರೆಯಲಾಗುತ್ತದೆ. ಸರ್ಕಾರಿ ಪ್ರಾಯೋಜಿತ ಆರೋಗ್ಯ ವಿಮಾ ಯೋಜನೆಯಾದ ಇದರಡಿಯಲ್ಲಿ ಕುಟುಂಬಗಳು ವಾರ್ಷಿಕ 5 ಲಕ್ಷ ರೂಪಾಯಿವರೆಗಿನ ಉಚಿತ ಚಿಕಿತ್ಸೆಯನ್ನು ಪಡೆಯುತ್ತಾರೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯ ಎರಡರಲ್ಲೂ ಚಿಕಿತ್ಸೆ ಪಡೆಯಬಹುದು. ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಯೋಜನೆ ಅನ್ವಯಿಸುತ್ತದೆ.
ಬಡ ಕುಟುಂಬದ ಒಬ್ಬ ವ್ಯಕ್ತಿ ಅನಾರೋಗ್ಯಕ್ಕೀಡಾದರೂ ಇಡೀ ಕುಟುಂಬ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತದೆ. ಅನಾರೋಗ್ಯ ಕುಟುಂಬವನ್ನು ಮತ್ತಷ್ಟು ಬಡತನಕ್ಕೆ ದೂಡುತ್ತದೆ. ಪ್ರಾಣ ಕಾಪಾಡಿಕೊಳ್ಳುವ ಸಲುವಾಗಿ ಇದ್ದ ಆಸ್ತಿ, ಮನೆಯನ್ನೂ ಅಡವು ಇಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಇಂತಹ ಸನ್ನಿವೇಶಗಳನ್ನು ತಪ್ಪಿಸುವ ಸಲುವಾಗಿಯೇ ಕೇಂದ್ರ ಸರಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಇಂದು ಆಯುಷ್ಮಾನ್ ಭಾರತ್ ಬಡವರ ಪಾಲಿನ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ. ಲಕ್ಷಾಂತರ ಕುಟುಂಬಗಳು ಯೋಜನೆಯಡಿ ಉಚಿತ ಚಿಕಿತ್ಸೆಯನ್ನು ಪಡೆದುಕೊಂಡಿವೆ.
ಆಯುಷ್ಮಾನ್ ಭಾರತ್ ಯೋಜನೆ ಆಸ್ಪತ್ರೆಗೆ ದಾಖಲಾದ ಬಳಿಕ ಖರ್ಚುವೆಚ್ಚಗಳನ್ನು ಪಾವತಿಸುತ್ತದೆ. ಫಾಲೋಅಪ್ ಚಿಕಿತ್ಸೆಯ ಮೊತ್ತವನ್ನು ಕೂಡ ಪಡೆದುಕೊಳ್ಳಬಹುದು. ಈ ಯೋಜನೆಯಡಿ 50 ವಿಧದ ಕ್ಯಾನ್ಸರ್ಗಳಿಗೆ ಕಿಮೋಥೆರಪಿ ಚಿಕಿತ್ಸೆಯ ವೆಚ್ಚ ಸಿಗುತ್ತದೆ.
ವಿಶ್ವದ ಅತಿದೊಡ್ಡ ಆರೋಗ್ಯ ಸೇವಾ ಯೋಜನೆ ಮಹಿಳೆಯರ ಪಾಲಿಗೂ ಜೀವರಕ್ಷಕನಾಗುತ್ತಿದೆ. ಕುಟುಂಬದ ಹಣಕಾಸಿನ ಸಮಸ್ಯೆಯ ಕಾರಣದಿಂದ ಹಿಂದೆ ಮಹಿಳೆಯರು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದರು. ಆದರೆ ಈಗ ಈ ಯೋಜನೆಯಿಂದ ಸಮಸ್ಯೆ ನಿರ್ಮೂಲನೆಯಾಗಿದೆ. ಯೋಜನೆ ಅಡಿ ಆಸ್ಪತ್ರೆಗೆ ದಾಖಲಾಗುತ್ತಿರುವರವರ ಪೈಕಿ 47.5% ಮಹಿಳೆಯರು ಎಂಬುದು ವಿಶೇಷ. 141 ಆರೋಗ್ಯ ಪ್ರಯೋಜನ ಪ್ಯಾಕೇಜ್ (HBP)ಯನ್ನು ಮಹಿಳೆಯರಿಗೆಂದೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.
ಪಿಎಂ-ಜೆಎವೈ ಅಡಿಯಲ್ಲಿ 2021ರ ಸೆ.21ರವರೆಗೆ 26,400 ಕೋಟಿ ರೂಪಾಯಿಗಳ 2.19 ಕೋಟಿ ಆಸ್ಪತ್ರೆ ದಾಖಲಾತಿ ನಡೆದಿದೆ. ಸರಾಸರಿ ಪ್ರತಿ ನಿಮಿಷಕ್ಕೆ 14 ಆಸ್ಪತ್ರೆ ದಾಖಲಾತಿಗಳು ನಡೆಯುತ್ತಿವೆ.
16.5 ಆಯುಷ್ಮಾನ್ ಕಾರ್ಡುಗಳನ್ನು ಇದುವರೆಗೆ ವಿತರಣೆ ಮಾಡಲಾಗುತ್ತಿದೆ. ಸರಾಸರಿ ಪ್ರತಿ ನಿಮಿಷಕ್ಕೆ 105 ಆಯುಷ್ಮಾನ್ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಸುಮಾರು 60 ಕೋಟಿ ಫಲಾನುಭವಿಗಳನ್ನು ಯೋಜನೆ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.