ನವದೆಹಲಿ: ನೇಕಾರರು ಮತ್ತು ಕುಶಲಕರ್ಮಿಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಒದಗಿಸುವ ನಿಟ್ಟಿನಲ್ಲಿ ರೂಪಿಸಲಾದ ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ (ಜಿಇಎಂ) ಪೋರ್ಟಲ್ ನೇಕಾರರು ಮತ್ತು ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಸರ್ಕಾರ ಇಲಾಖೆಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಡುತ್ತಿದೆ.
ಸರ್ಕಾರಿ ಮಾರುಕಟ್ಟೆ ಪ್ರವೇಶಿಸಲು ಸವಾಲು ಎದುರಿಸುತ್ತಿದ್ದ ಕುಶಲಕರ್ಮಿಗಳು, ನೇಕಾರರು, ಸಣ್ಮ ಉದ್ಯಮಿಗಳು, ಮಹಿಳೆಯರು, ಬುಡಕಟ್ಟು ಉದ್ಯಮಿಗಳು ಮತ್ತು ಕೈಮಗ್ಗ ಮತ್ತು ಕರಕುಶಲ ಕೆಲಸ ಮಾಡುವ ಸ್ವಸಹಾಯ ಗುಂಪುಗಳಂತಹ ಮಾರಾಟಗಾರರ ಗುಂಪುಗಳ ಭಾಗವಹಿಸುವಿಕೆಯನ್ನು ಈ ಪೋರ್ಟಲ್ ಹೆಚ್ಚಿಸುತ್ತಿದೆ.
ಸರ್ಕಾರದ ಮಾಹಿತಿಯ ಪ್ರಕಾರ, 28,374 ಕುಶಲಕರ್ಮಿಗಳು ಮತ್ತು 1,49,422 ನೇಕಾರರು ಪೋರ್ಟಲ್ನಲ್ಲಿ 30 ಆಗಸ್ಟ್ 2021 ರವರೆಗೆ ನೋಂದಾಯಿಸಿಕೊಂಡಿದ್ದಾರೆ. ಜುಲೈ 2020 ರಲ್ಲಿ ನೇಕಾರರು ಮತ್ತು ಕುಶಲಕರ್ಮಿಗಳ ಮಾರಾಟಗಾರರ ನೋಂದಣಿ ಅನ್ನು ಅಭಿವೃದ್ಧಿ ಆಯುಕ್ತರ ಕಛೇರಿಯ ಅಧಿಕಾರಿಗಳ ನೆರವಿನಿಂದ ಆರಂಭಿಸಲಾಯಿತು.56 ಕರಕುಶಲ ಸೇವಾ ಕೇಂದ್ರಗಳು ಮತ್ತು 28 ನೇಕಾರ ಸೇವಾ ಕೇಂದ್ರಗಳ ಅಧಿಕಾರಿಗಳು ತರಬೇತಿ ಮತ್ತು ಮಾರಾಟಗಾರರ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೈಮಗ್ಗ ಉತ್ಪನ್ನಗಳಿಗಾಗಿ 28 ವಿಶೇಷ ಉತ್ಪನ್ನ ವಿಭಾಗಗಳನ್ನು ರಚಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಕರಕುಶಲ ಉತ್ಪನ್ನಗಳಿಗಾಗಿ ಏಕಕಾಲದಲ್ಲಿ 170 ಕಸ್ಟಮ್ ಉತ್ಪನ್ನ ವರ್ಗಗಳನ್ನು ರಚಿಸಲಾಗಿದೆ. ಕುಶಲಕರ್ಮಿಗಳು, ನೇಕಾರರು, ಸಹಕಾರಿ ಸಂಘಗಳು, ಎಸ್ಎಚ್ಜಿಗಳು ಮತ್ತು ಉತ್ಪಾದಕ ಕಂಪನಿಗಳಿಂದ ತಯಾರಿಸಿದ ಉನ್ನತ ಗುಣಮಟ್ಟದ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಲು ಭಾರತೀಯ ಕೈಮಗ್ಗ ಮತ್ತು ಭಾರತೀಯ ಕರಕುಶಲ ಉತ್ಪನ್ನಗಳಿಗಾಗಿ ಮೀಸಲಾದ ವೆಬ್-ಬ್ಯಾನರ್ಗಳು ಮತ್ತು ಮಾರುಕಟ್ಟೆ ಪೇಜ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಕ್ರಮವು ಸರ್ಕಾರದ ಖರೀದಿದಾರರೊಂದಿಗೆ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ನೇಕಾರರು ಮತ್ತು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಲು ಅಧಿಕಾರ ನೀಡುತ್ತದೆ. ಖರೀದಿದಾರರು ಮಧ್ಯವರ್ತಿಗಳು ಇಲ್ಲದೆ ವ್ಯವಹರಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.