ಇಂದು ಮೋದಿಜಿಯವರ ಜನುಮ ದಿನ. ಹೀರಾ ಬೆನ್ ತಾಯಿಗೆ ಶರಣು ತಾಯಿ. ನೀವು ಭಾರತಕ್ಕೆ ಬೆಳಕನ್ನು ನೀಡಿದಿರಿ. ದಾಮೋದರದಾಸ್ ಮೂಲಚಂದ್ ಮೋದಿ ಮತ್ತು ಹೀರಾ ಬೆನ್ ಅವರ ಆರು ಮಕ್ಕಳಲ್ಲಿ ಮೂರನೆಯವರು ನರೇಂದ್ರ ಮೋದಿ.
ನಮೋ ಬಗ್ಗೆ ಹೇಳಲು ರಾಶಿ ರಾಶಿ ಇದೆ. ಅವರೊಂದು ತೆರೆದಿಟ್ಟ ಅಪರೂಪದ ಪುಸ್ತಕ. ಅವರ ಬಗ್ಗೆ ಎಲ್ಲರಿಗೂ ಗೊತ್ತು. ಹಾಗಾಗಿ ಗೊತ್ತಿಲ್ಲದೆ ಇರುವುದನ್ನು ತಿಳಿಸೋಣ ಎಂಬುದು ಪುಟ್ಟ ಆಸೆ. ಭಾರತದ ಹೃದಯವಾಗಿ ನಿಂತು ಎಡೆ ಬಿಡದೆ ಒಂದು ದಿನದ ರಜೆಯನ್ನೂ ಪಡೆಯದೆ ಸೇವೆ ಸಲ್ಲಿಸಿದವರು ಅವರು. 2014 ರಂದು ಸಂಸತ್ತಿಗೆ ತಲೆ ಬಾಗಿ ನಮಸ್ಕರಿಸಿ ಅಡಿಯಿಟ್ಟ ಕ್ಷಣದಿಂದ ಈ ಗಳಿಗೆಯ ತನಕವೂ ಅವರು ದೇಶಕ್ಕಾಗಿ ದುಡಿಯುತ್ತಲೇ ಇದ್ದಾರೆ.
ದೇವರು ಆ ಕಲಾವಿದನ ಕೈಯಲ್ಲಿ ಏನು ಕೊಟ್ಟಿದ್ದಾನೋ ಗೊತ್ತಿಲ್ಲ, ಮೋದಿಜಿಯ ಮೋಡಿಗೆ ಸಿಲುಕಿದ ವರುಷಗಳು ಇವು. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಗಡಿಗಳ ಮೀರಿ ಯಾವ ಹಂತದ ತನಕ ತಲುಪಬಲ್ಲ ಎಂಬುದಕ್ಕೆ ಅವರು ಸಾಕ್ಷಿ. ಮತ್ತು ಅದೇ ಪ್ರಜಾಪ್ರಭುತ್ವದ ಚೆಲುವು. ಜನರು ನೆನಪು ಮಾಡಿಕೊಳ್ಳುತ್ತಾರೆ ಅಂದರೆ ಭಾರತವನ್ನು ನೆನಪು ಮಾಡಿಕೊಳ್ಳಲಿ, ಮೋದಿಯನ್ನಲ್ಲ ಎಂದ ವಿಶಾಲ ಹೃದಯಿ ಅವರು. ಸರಿ ಸುಮಾರು ಒಂದೂವರೆ ದಶಕ ಮುಖ್ಯಮಂತ್ರಿ, ಏಳು ಎಂಟು ವರ್ಷಗಳಿಂದ ಪ್ರಧಾನಮಂತ್ರಿ ಹುದ್ದೆಯಲ್ಲಿ ಆಡಳಿತ ನಡೆಸಿದರೂ ಅವರ ಹೆಸರಿನಲ್ಲಿ ಒಂದು ಮನೆಯನ್ನೂ ಕಟ್ಟದ ಪ್ರಧಾನ ಸೇವಕ. ಇತ್ತೀಚೆಗೆ ಕ್ರಿಕೆಟ್ ಮಂಡಳಿ ಒಂದು ಅವರ ಹೆಸರಿನ ಕ್ರೀಡಾಂಗಣ ನಿರ್ಮಿಸಿದೆ ಅಂತ ದೊಡ್ಡ ಸುದ್ದಿ ಆಗಿತ್ತು. ವಿಷಯ ಏನೆಂದರೆ ಗುಜರಾತ್ ಕ್ರಿಕೆಟ್ ಸಂಸ್ಥೆ ಒಂದು ಖಾಸಗಿ ಸಂಸ್ಥೆ. ತನ್ನ ಸುಪರ್ದಿಯ ಒಂದು ಅಂಗಣದ ದುರಸ್ತಿ ಕಾರ್ಯ ನಡೆಸಿ, ಅದರ ಒಂದು ಭಾಗಕ್ಕೆ ಅವರ ಹೆಸರು ಇಟ್ಟಿದ್ದು ಬಿಟ್ಟರೆ, ಯಾವುದೇ ಸರ್ಕಾರಿ ಕಟ್ಟಡ ಅಥವಾ ಯೋಜನೆಗೆ ಅವರ ಅಥವಾ ಅವರ ಕುಟುಂಬದವರ ಹೆಸರು ಇಟ್ಟಿರುವ ಉದಾಹರಣೆ ಅವರ ರಾಜಕೀಯ ಜೀವನದಲ್ಲೇ ಇಲ್ಲ.
ನರೇಂದ್ರ ಮೋದಿಯವರು,
* ಅವರು ಅಧಿಕಾರ ವಹಿಸಿಕೊಂಡಾಗ ಅವರ ತಾಯಿ ಜೀವಂತವಾಗಿದ್ದ ಭಾರತದ ಮೊದಲ ಪ್ರಧಾನಿ.
* ಅವರು ಸತತ ಮೂರು ಬಾರಿ ಗುಜರಾತ್ ಮುಖ್ಯಮಂತ್ರಿ ಸ್ಥಾನವನ್ನಲಂಕರಿಸಿದ್ದರು.
* ಮೊದಲ ಬಾರಿಗೆ ಶಾಸಕರಾಗಿ ಅವರು ಗುಜರಾತಿನ ಸಿಎಂ ಆದರು ಮತ್ತು ಮೊದಲ ಬಾರಿಗೆ ಸಂಸದರಾಗಿ ಭಾರತದ ಪ್ರಧಾನಿಯಾದರು.
* ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಎರಡನೇ ಅವಧಿಗೆ ಆಯ್ಕೆಯಾದ ಮೊದಲ ಬಿಜೆಪಿ ನಾಯಕ.
ದೇಶದ ಸೈನಿಕರ ಶವಗಳನ್ನು ಕತ್ತರಿಸಿ ಕಳಿಸಿದಾಗ ಹೋಗಿ ಅಮೇರಿಕಾದ, ವಿಶ್ವಸಂಸ್ಥೆಯ ಬಾಗಿಲು ತಟ್ಟಿ ಬಂದ ಪ್ರಧಾನಿಯು ನಮ್ಮಲ್ಲಿದ್ದರು. ಜಿಡಿಪಿ ಶೇಕಡಾ 5ಕ್ಕೆ ಇಳಿದಾಗ ಹಣಕಾಸು ಸಚಿವರಾಗಿ, ವಿಶ್ವ ಮಟ್ಟದಲ್ಲಿ ಹಣಕಾಸು ತಜ್ಞರೇ ಆಗಿದ್ದ ಪ್ರಧಾನಮಂತ್ರಿ ಮತ್ತು ಅವರ ಸಚಿವಾಲಯ ಐದು ಪರ್ಸೆಂಟ್ ಎಂಬುದು ಒಳ್ಳೆಯ ಸ್ಥಿತಿ ಎಂದಿದ್ದರು. ಅದು ಬಿಡಿ, ಅದ್ಯಾವ ಗಳಿಗೆಯಲ್ಲಿ ತತ್ವಜ್ಞಾನಿ ನಾಸ್ಟ್ರೋಡಮಸ್ ಆ ಮಾತುಗಳನ್ನು ಹೇಳಿದರೋ ಗೊತ್ತಿಲ್ಲ, ಅವರ ಮಾತುಗಳು ಅಕ್ಷರಶಃ ಸತ್ಯವಾದವು “ಇಪ್ಪತ್ತೊಂದನೆಯ ಶತಮಾನದಲ್ಲಿ ಭಾರತವನ್ನು ಪರ್ಯಾಯ ದ್ವೀಪದಂತಹ ಪ್ರದೇಶದಿಂದ ಬಂದ ರಾಜ ಆಗುತ್ತಾನೆ. ಆಗ ಭಾರತ ವಿಶ್ವ ಮಟ್ಟದಲ್ಲಿ ಕಂಗೊಳಿಸಲಿದೆ” ಎಂದಿದ್ದರು. ಆ ಮಾತುಗಳಿಗೆ ಮನಸ್ಸು ಕೊಟ್ಟರೇನೋ ಎಂಬಂತೆ ಪ್ಯಾರೇ ದೇಶವಾಸಿಗಳು ತಮ್ಮ ದೇಶವನ್ನು ಒಂದಲ್ಲ ಎರಡು ಬಾರಿ ಕೊಟ್ಟರು. ಆ ಕ್ಷಣದಿಂದ ಹಿಡಿದು ಇಲ್ಲಿಯ ತನಕ ಆ ರಾಜ ಭಾರತ ತಲೆ ತಗ್ಗಿಸಲು ಅವಕಾಶ ನೀಡಲೇ ಇಲ್ಲ. ಪಾಕಿಸ್ತಾನವು ಇಲ್ಲ ನಮಗೆ ಭಾರತದ ದಾಳಿಯ ಭಯ ಇದೆ ಎಂಬಲ್ಲಿಂದ ಹಿಡಿದು, ಹಳ್ಳಿಯ ಅಜ್ಜಿ ತನ್ನ ಕುರಿ, ಕರು ಮಾರಿ ಶೌಚಾಲಯ ಕಟ್ಟುವ ತನಕ, ವಿಶ್ವ ಸ್ನೇಹಿತರ ದಿನದಂದು ಇಸ್ರೇಲ್ ದೇಶವು ಭಾರತ ನನ್ನ ಜೀವದ ಗೆಳೆಯ ಎನ್ನುವಲ್ಲಿಂದ ಹಿಡಿದು, ಶ್ರೀಲಂಕಾ, ಬಾಂಗ್ಲಾ, ಅಮೇರಿಕ ಅಲ್ಲದೆ ಅರಬ್ ದೇಶಗಳು ಸಹ ಕಾಶ್ಮೀರ ಭಾರತದ ಅಂತರಿಕ ವಿಷಯ ಎನ್ನುವ ತನಕ ಎಲ್ಲವನ್ನೂ ಮೋದಿಯವರೇ ಮಾಡಿದ್ದು ಎನ್ನಲು ಹೆಮ್ಮೆಯಾಗುತ್ತದೆ. ಯಾವ ಕ್ಷಣದಲ್ಲಿ ರಾಜನಾಥ್ ಸಿಂಗ್ ತಡ ಮಾಡದೆ ನಮೋರವರಿಗೆ ದೆಹಲಿಯ ಗದ್ದುಗೆಯನ್ನು ನೀಡಿದರೋ ಅವರು ನಿಜಕ್ಕೂ ದೊಡ್ಡ ಉಪಕಾರ ಮಾಡಿದರು ಎನ್ನಬಹುದು.
ಅದು 2014 ರ ಸೆಪ್ಟೆಂಬರ್ ತಿಂಗಳು. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಮಾತನಾಡಿದ್ದು ಎಂಬುದು ಒಂದು ವಿಶೇಷ. “ಇಂದು ಅಹಮದಾಬಾದಿನಿಂದ ಒಂದು ಕಿಲೋ ಮೀಟರ್ ದೂರ ಆಟೋದಲ್ಲಿ ತೆರಳಲು ಹತ್ತು ರೂಪಾಯಿ ಬೇಕು. ಆದರೆ ನಾವು ಭಾರತೀಯರು 65615 ಮಿಲಿಯನ್ ಕಿಲೋ ಮೀಟರ್ ಮಂಗಳನ ಯಾತ್ರೆ ಮಾಡಿದೆವು. ಅದು ಸ್ವದೇಶಿ ನಿರ್ಮಿತ ಸಾಮಗ್ರಿಗಳನ್ನು ಬಳಸಿ. ವಿಶೇಷ ಏನು ಗೊತ್ತಾ ಅದು ಕೇವಲ ಏಳು ರೂಪಾಯಿ ಪ್ರತಿ ಕಿ.ಮೀ.ಗೆ. ಅದು ಭಾರತೀಯರ ತಾಕತ್ತು. ಮೊದಲ ಪ್ರಯತ್ನದಲ್ಲೇ ಮಂಗಳ ತಲುಪಿದ ಮೊದಲಿಗರು ನಾವು, ಅದು ಹಾಲಿವುಡ್ನ ಒಂದು ಚಿತ್ರದ ಬಜೆಟ್ಟಿಗಿಂತ ಕಡಿಮೆ ವೆಚ್ಚದಲ್ಲಿ.” ಹೀಗೆ ನಮ್ಮ ಪ್ರಧಾನಿಯೊಬ್ಬರು ವಿದೇಶಕ್ಕೆ ಹೋಗಿ ನಮ್ಮ ದೇಶವನ್ನು ಹೊಗಳಿದ್ದು ಉಂಟೆ? ನೆರೆದ ಅನಿವಾಸಿ ಭಾರತೀಯರಲ್ಲಿ ರೋಮಾಂಚನವಾದ ಅನುಭವ. ಮಂಗಳಯಾನದ ಸಂದರ್ಭಕ್ಕೆ ಮೋದಿಜಿಯವರನ್ನು ಕರೆಯುವಾಗ ಇಸ್ರೋ ವಿಜ್ಞಾನಿಗಳು, ಇದು ತಮ್ಮ ಮೊದಲ ಪ್ರಯತ್ನ. ನಿಮ್ಮನ್ನು ಕರೆಯಬೇಕೋ ಬೇಡವೋ ತಿಳಿಯುತ್ತಿಲ್ಲ ಎಂದಿದ್ದರು. ಆದರೆ ಮೋದಿಜಿಯವರು ತಾನು ಬರುತ್ತೇನೆ. ಗೆಲುವಿನ ಶ್ರೇಯ ಎಲ್ಲರಿಗೂ ಸಲ್ಲಲಿ. ಆದರೆ ಸೋತರೆ ಅದರ ಜವಾಬ್ದಾರಿಯನ್ನು ತಾ ಹೊರುತ್ತೇನೆ ಎಂದು ಹೇಳಿದಾಗ ಇಡೀ ಇಸ್ರೋ ಕರತಾಡನದಲ್ಲಿ ಮುಳುಗಿ ಹೋಗಿತ್ತು.
ಇಸ್ರೋ ಅಧ್ಯಕ್ಷ ಕೆ. ಸಿವನ್, “ಪ್ರಧಾನಿ ನಮಗೆ ಸ್ಫೂರ್ತಿ ಮತ್ತು ಅಭಯದ ಚಿಲುಮೆ. ಅವರ ಮಾತುಗಳು ನಮ್ಮಲ್ಲಿ ಹೊಸ ಉತ್ಸಾಹ ತುಂಬುತ್ತವೆ. ಅದರಲ್ಲೂ ಅವರ ಭಾಷಣದಲ್ಲಿ ಗಮನಿಸಿದ ಅಂಶವೆಂದರೆ ‘ವಿಜ್ಞಾನವನ್ನು ಎಂದಿಗೂ ಫಲಿತಾಂಶಗಳಿಂದ ನೋಡಬಾರದು, ಅದನ್ನು ಪ್ರಯೋಗಗಳಿಂದಷ್ಟೇ ನೋಡಬೇಕು. ಅವು ನಮ್ಮನ್ನು ಫಲಿತಾಂಶದ ಕಡೆಗೆ ಒಯ್ಯುತ್ತವೆ’ ಎನ್ನುವುದು.”
ಮೊದಲ ಬಾರಿಗೆ ಚೀನೀ ವೈರಸ್ ಬಂದಾಗ ಕರ್ನಾಟಕದಷ್ಟು ಜನಸಂಖ್ಯೆ ಹೊಂದಿದ್ದ ಇಟಲಿ ಅಂತಹ ದೇಶಗಳೇ ನಡುಗಿಹೋದವು. ಆದರೆ ಭಾರತ 140 ಕೋಟಿಯಷ್ಟು ಜನಸಂಖ್ಯೆಯುಳ್ಳ ದೇಶ, ಕಿಂಚಿತ್ ಅಲುಗದೆ ಅಂತೆಯೇ ಇದೆ. ಅದರ ಹಿಂದೆ ಮೋದಿಜಿಯವರ ದೂರದೃಷ್ಟಿ ಮತ್ತು ಕಾಳಜಿ ಇದ್ದೇ ಇದೆ. ನಾವೇ ವಿಜ್ಞಾನ ಎನ್ನುತ್ತಿದ್ದ ಎಷ್ಟೋ ದೇಶಗಳು, ಅದರ ಮುಖ್ಯಸ್ಥರು ಕೈ ಚೆಲ್ಲಿ ಸಾರ್ವಜನಿಕವಾಗಿ ಆಗಲ್ಲ ಎನ್ನುತಿದ್ದಾಗ ಭಾರತದ ಪ್ರಧಾನಿ ಔಷಧಗಳ ರಫ್ತಿಗೆ ತಯ್ಯಾರಿ ನಡೆಸುತ್ತಿದ್ದರು. ಇಂತಹ ವೇಗ ಹಿಂದೆಂದೂ ಕಂಡಿರಲಿಲ್ಲ.
ಒಮ್ಮೊಮ್ಮೆ ಅನಿಸುತ್ತದೆ ಮೋದಿಯವರು ಯಾಕಾದರೂ ಇಷ್ಟು ತಡವಾಗಿ ಪ್ರಧಾನಿ ಆದರೋ ಎಂದು. ವಿದೇಶ ಪರದೇಶಗಳನ್ನು ಬುಟ್ಟಿ ತುಂಬಿ ತಂದ, ಕರ್ಮಾಚಾರಿಯ ಪಾದ ತೊಳೆದ, ಕೆಂಪು ಕೋಟೆಯ ಮೇಲಿಂದ ಶೌಚಾಲಯ ಕಟ್ಟಲು ಕರೆ ಕೊಟ್ಟ, ಬಗಲ ವೈರಿಯ ಬುಡದಲ್ಲಿ ಭಯ ಹುಟ್ಟಿಸಿ ವೀರ ಯೋಧನ ಹೋದಂತೆಯೇ ಕರೆ ತಂದ, ಕಾಶ್ಮೀರದ ಬಾಗಿಲನ್ನು ತೆರೆದ ನಾಯಕನನ್ನು ಬರಿ ಗುಜರಾತ್ ದೊಡ್ಡ ಪಾಲು ಇಟ್ಟುಕೊಂಡಿತ್ತಲ್ಲ ಎಂದು ಅಸೂಸೆಯೂ ಆಗುತ್ತದೆ. ವಿಜ್ಞಾನ ಎಂದರೆ ಸೈನ್ಸ್ ಎಂದರ್ಥವಲ್ಲ. ಅದು ವಿಶೇಷವಾದ ಜ್ಞಾನ. ಪುರಾಣಗಳ ಕಾಲದಿಂದಲೂ ಭಾರತೀಯರು ಗಣಿತ, ವೈದ್ಯಕೀಯ, ಸಾಹಿತ್ಯ, ಬಾಹ್ಯಾಕಾಶ, ವೈಮಾನಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ವಿಶೇಷವಾದ ಸಿದ್ಧಿ ಪಡೆದಿದ್ದಾರೆ. ಅದಕ್ಕೊಂದು ಆಲಿಂಗಿಸುವ ಶಕ್ತಿ ಬೇಕಿತ್ತು. ಆ ಶಕ್ತಿ ಸರಿ ಸುಮಾರು ಏಳೆಂಟು ವರ್ಷಗಳಿಂದ ಭಾರತವನ್ನು ಕಾಯುತ್ತಿದೆ.
ಮತ್ತೆ ಬಂದಿದೆ ಕೋರೋನ,
ಬನ್ನಿ ಉಳಿಸೋಣ ಭಾರತವನ್ನ,
ಅಂದೂ ಗೆದ್ದಿದೆವು, ಇಂದು ಗೆಲ್ಲುವೆವು,
ಯಾಕೆಂದರೆ ನಂಬಿರುವುದು ಚೌಕಿದಾರನನ್ನ..
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ನರೇಂದ್ರ ಮೋದಿಜೀ. ನನ್ನ ಆಯಸ್ಸು ನಿಮಗೆ ಇರಲಿ.
✍ ಸಚಿನ್ ಸಾಗರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.