ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು G2O ಗಾಗಿ ಭಾರತದ ಶೆರ್ಪಾ ಆಗಿ ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಭಾರತವು ಮುಂದಿನ ವರ್ಷ ಡಿಸೆಂಬರ್ 1 ರಿಂದ ಜಿ 20 ಅಧ್ಯಕ್ಷತೆಯನ್ನು ಮುನ್ನಡೆಸಲಿದೆ ಮತ್ತು 2023 ರಲ್ಲಿ ಮೊದಲ ಬಾರಿಗೆ ಜಿ 20 ನಾಯಕರ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಸಚಿವಾಲಯ ತಿಳಿಸಿದೆ.
ಜಿ 20 ಸಭೆಗೆ ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ಬದಲಿಗೆ ಪಿಯೂಷ್ ಗೋಯಲ್ ಅವರನ್ನು ಶೆರ್ಪಾ ಆಗಿ ನೇಮಿಸಲಾಗಿದೆ.
ಪತ್ರಿಕಾ ಪ್ರಕಟಣೆಯಲ್ಲಿ, ಮುಂದಿನ ಜಿ 20 ಶೃಂಗಸಭೆಯು ಇಟಲಿ ಅಧ್ಯಕ್ಷತೆಯ ಅಡಿಯಲ್ಲಿ 2021 ರ ಅಕ್ಟೋಬರ್ 30-31ಕ್ಕೆ ನಿಗದಿಯಾಗಿದೆ ಎಂದು ಸಚಿವಾಲಯ ಹೇಳಿದೆ.
ಒಂದು ಪ್ರಮುಖ ಅಂತಾರಾಷ್ಟ್ರೀಯ ಗುಂಪಾಗಿರುವ ಜಿ 20, ವಿಶ್ವದ 19 ಪ್ರಮುಖ ಆರ್ಥಿಕತೆಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಒಟ್ಟುಗೂಡಿಸುತ್ತದೆ. ಜಿ 20 ಸದಸ್ಯರು ಜಾಗತಿಕ ಜಿಡಿಪಿಯ ಶೇಕಡಾ 80 ಕ್ಕಿಂತ ಹೆಚ್ಚು, ಜಾಗತಿಕ ವ್ಯಾಪಾರದ ಶೇಕಡಾ 75 ಮತ್ತು ಜಾಗತಿಕ ಜನಸಂಖ್ಯೆಯ ಶೇಕಡಾ 60 ರಷ್ಟನ್ನು ಹೊಂದಿದ್ದಾರೆ.
1999 ರಲ್ಲಿ ಸ್ಥಾಪನೆಯಾದಾಗಿನಿಂದ ಭಾರತವು ಜಿ 20 ಸದಸ್ಯತ್ವ ಹೊಂದಿದೆ. “ಭಾರತವು 1 ಡಿಸೆಂಬರ್ 2022 ರಿಂದ ಜಿ 20 ಅಧ್ಯಕ್ಷತೆ ಹೊಂದಲಿದೆ ಮತ್ತು 2023 ರಲ್ಲಿ ಮೊದಲ ಬಾರಿಗೆ ಜಿ 20 ನಾಯಕರ ಶೃಂಗಸಭೆಯನ್ನು ಕರೆಯಲಿದೆ.
ಪ್ರಧಾನಿ ನರೇಂದ್ರ ಮೋದಿ 2014 ರಿಂದ ಜಿ 20 ಶೃಂಗಸಭೆಯಲ್ಲಿ ಭಾರತದ ಪ್ರಾತಿನಿಧ್ಯವನ್ನು ಮುನ್ನಡೆಸುತ್ತಿದ್ದಾರೆ , ಮೆಕ್ಸಿಕೋ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಸದಸ್ಯ ರಾಷ್ಟ್ರಗಳಾಗಿವೆ. ಈ ವರ್ಷ, ಜಿ 20 ಸಭೆ ರೋಮ್ನಲ್ಲಿ ಅಕ್ಟೋಬರ್ 30-31ರಲ್ಲಿ ನಡೆಯಲಿದೆ.
ಸೆಪ್ಟೆಂಬರ್ 5 ರಂದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮನ್ಸುಖ್ ಮಾಂಡವಿಯವರು, “ಜನರು, ಭೂಮಿ ಮತ್ತು ಸಮೃದ್ಧಿ” ಎಂಬ ವಿಷಯದ ಕುರಿತ 2021 ರ ಜಿ 20 ಆರೋಗ್ಯ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯನ್ನು ಇಟಲಿಯ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.