ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಿಮಾಚಲಪ್ರದೇಶದ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಮ್ ಅವರು ಕೂಡ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್, ಹಿಮಾಚಲ ಪ್ರದೇಶದಲ್ಲಿ ಶೇಕಡ 100ರಷ್ಟು ಮೊದಲ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ನವೆಂಬರ್ ತಿಂಗಳ ಒಳಗಡೆ ಶೇ.100ರಷ್ಟು ಎರಡನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಹಿಮಾಚಲ ಪ್ರದೇಶದ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ. ಅಲ್ಲದೆ ಶೇಕಡ ನೂರರಷ್ಟು ಲಸಿಕೆ ವ್ಯಾಪ್ತಿಯನ್ನು ಸಾಧಿಸುವವರೆಗೂ ವಿಶ್ರಾಂತಿ ಪಡೆಯಬಾರದು ಎಂದಿದ್ದಾರೆ.
“ತಂಡವಾಗಿ ಹಿಮಾಚಲಪ್ರದೇಶ ಕಾರ್ಯನಿರ್ವಹಿಸುತ್ತಿರುವುದು ಮತ್ತು ಶೇಕಡ ನೂರರಷ್ಟು ಮೊದಲ ಡೋಸ್ ಲಸಿಕೆಯನ್ನು ನಾಗರಿಕರಿಗೆ ನೀಡಿರಿವುದು ನಿಜಕ್ಕೂ ಹೃದಯಸ್ಪರ್ಶಿ. ಮಾರಣಾಂತಿಕ ಸಾಂಕ್ರಾಮಿಕ ದ ವಿರುದ್ಧ ಹೋರಾಡುವಲ್ಲಿ ಹಿಮಾಚಲಪ್ರದೇಶ ಚಾಂಪಿಯನ್ ಆಗಿ ಹೊರಹೊಮ್ಮಿದೆ” ಎಂದಿದ್ದಾರೆ.
“ಹಿಮಾಚಲ ಪ್ರದೇಶ ಕೇವಲ ಭಾರತದ ನೈತಿಕತೆಯನ್ನು ಹೆಚ್ಚಿಸಿಲ್ಲ, ಕೋವಿಡ್ ಲಸಿಕೆಯಲ್ಲಿ ಆತ್ಮ ನಿರ್ಭರತೆ ಸಾಧಿಸುವುದು ಎಷ್ಟು ಮುಖ್ಯ ಎಂಬುದನ್ನು ಇದು ತೋರಿಸುತ್ತದೆ. ವಿಶ್ವದ ಅತಿ ದೊಡ್ಡ ಲಸಿಕ ಅಭಿಯಾನದ ಮೂಲಕ ಪ್ರತಿನಿತ್ಯ ಭಾರತ ದಾಖಲೆಯನ್ನು ನಿರ್ಮಿಸುತ್ತಿದೆ. ಮೊದಲ ಡೋಸ್ ಪಡೆದುಕೊಂಡವರು ಎರಡನೇ ಡೋಸ್ ಪಡೆದುಕೊಳ್ಳುವುದನ್ನು ನಾವು ಖಚಿತಪಡಿಸಬೇಕಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.