ಬೆಂಗಳೂರು: ಹೊಸ ತಲೆಮಾರಿನ ಹನ್ಸಾ ಎನ್ ಜಿ ತರಬೇತಿ ವಿಮಾನ ಬೆಂಗಳೂರು ವಿಮಾನ ತರಬೇತಿ ವಲಯಕ್ಕೆ ಇಂದು ಸೇರ್ಪಡೆಗೊಂಡಿದೆ.
ಈ ವಿಮಾನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಇಂದು ಯಶಸ್ವಿಯಾಗಿ ಹಾರಾಟ ನಡೆಸಿತು. ಈ ವಿಮಾನವನ್ನು ಸಿಎಸ್ಐಆರ್ ಮತ್ತು ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ಸಂಸ್ಥೆ ವಿನ್ಯಾಸಗೊಳಿಸಿ, ತಯಾರಿಸಿದೆ. ನಿನ್ನೆ ಮಧ್ಯಾಹ್ನದ ವೇಳೆ ಈ ವಿಮಾನ ತನ್ನ ಹಾರಾಟವನ್ನು ಯಶಸ್ವಿಯಾಗಿ ಮುಗಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಮಾನವನ್ನು ಟೆಸ್ಟ್ ಪೈಲಟ್ ಕ್ಯಾಪ್ಟನ್ ಅಮಿತ್ ದಹಿಯಾ ಅವರು ಸುಮಾರು 4 ಸಾವಿರ ಅಡಿ ಎತ್ತರದಲ್ಲಿ 80 ನಾಟಿಕಲ್ ವೇಗದಲ್ಲಿ ಸುಮಾರು 20 ನಿಮಿಷಗಳ ಕಾಲ ಹಾರಾಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ವಿಮಾನ ವನ್ನು ಟೆಕ್ಸ್ಟ್ ಬುಕ್ ಫ್ಲೈಟ್ ಎಂದು ಕರೆಯಲಾಗುತ್ತದೆ. ಇದರ ಎಲ್ಲ ನಿಯತಾಂಕಗಳು ಸಾಮಾನ್ಯವೆಂದು ಕಂಡುಬಂದಿದೆ. ಇದು ಕಡಿಮೆ ವೆಚ್ಚದ್ದಾಗಿದ್ದು, ಹೆಚ್ಚು ಸಹಿಷ್ಣುವಾಗಿದೆ.
ಈ ವಿಮಾನದ ಸರಣಿ ಉತ್ಪಾದನೆ ಶೀಘ್ರ ಪ್ರಾರಂಭವಾಗಲಿದ್ದು, ಈಗಾಗಲೇ ಖಾಸಗಿ ಪಾಲುದಾರರನ್ನು ಸಹ ಗುರುತಿಸಲಾಗಿದೆ ಎಂದು ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.