ಮಂಗಳೂರು: ನಗರದಲ್ಲಿ ಕೇಂದ್ರ ಆದಾಯ ಇಲಾಖೆಯ ಜಾರಿ ನಿರ್ದೇಶನಾಲಯ (ಇ. ಡಿ.) ಉಪವಲಯ ಕಚೇರಿ ಆರಂಭವಾಗಿದೆ.
ಇ.ಡಿ. ಕಚೇರಿಯು ಈ ವರೆಗೆ ರಾಜ್ಯಕ್ಕೆ ಸಂಬಂಧಿಸಿದಂತೆ ಕೇವಲ ಬೆಂಗಳೂರಿನಲ್ಲಿ ಮಾತ್ರವೇ ಇತ್ತು. ಇದೀಗ ಮಂಗಳೂರಿನಲ್ಲಿಯೂ ಮತ್ತೊಂದು ಪ್ರಮುಖ ಇ.ಡಿ. ಉಪಕಚೇರಿ ಆರಂಭವಾಗಿದೆ. ಈ ಕಚೇರಿ ವ್ಯಾಪ್ತಿಗೆ ದಕ್ಷಿಣ ಕನ್ನಡ, ಉಡುಪಿಗಳನ್ನು ಒಳಗೊಂಡಂತೆ 15 ಜಿಲ್ಲೆಗಳು ಸೇರಿವೆ.
ದೇಶೀಯ – ಅಂತಾರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆ, ಅವ್ಯವಹಾರ ಪ್ರಕರಣಗಳ ತನಿಖೆಯನ್ನು ಇ.ಡಿ. ನಡೆಸುತ್ತದೆ. ವಿದೇಶೀ ವಿನಿಮಯ ನಿರ್ವಹಣಾ ಕಾಯ್ದೆ, ಕಪ್ಪು ಹಣ ನಿಯಂತ್ರಣ ಕಾಯ್ದೆಯಡಿ ಈ ಕೇಂದ್ರ ಪ್ರಕರಣಗಳನ್ನು ನಿರ್ವಹಿಸಲಿದೆ.
ಈ ಕಚೇರಿಯು ಮಂಗಳೂರಿನ ಕಂಕನಾಡಿಯಲ್ಲಿ ಆರಂಭವಾಗಿದೆ. ಇದು ಬೆಂಗಳೂರು ವಲಯ ಕಚೇರಿತ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದೆ. ಉಪನಿರ್ದೇಶಕರು ಈ ಕಚೇರಿಯ ಮುಖ್ಯಸ್ಥರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.