ನವದೆಹಲಿ: ಭಾರತದ ಡ್ರೋನ್ ಶಸ್ತ್ರಾಗಾರಕ್ಕೆ ಪ್ರಮುಖ ಉತ್ತೇಜನ ನೀಡುವ ಬೆಳವಣಿಗೆ ನಡೆದಿದೆ. ಭಾರತೀಯ ಸೇನೆಯು ದೀರ್ಘ-ಶ್ರೇಣಿಯ ಯುದ್ಧತಂತ್ರದ ದಾಳಿ ಸಾಮರ್ಥ್ಯವಿರುವ 100 ಸ್ಫೋಟಕ ತುಂಬಿದ ‘ಸ್ಕೈಸ್ಟ್ರೈಕರ್’ ಡ್ರೋನ್ ಗಳನ್ನು ಖರೀದಿಸಲು ಸಜ್ಜಾಗಿದೆ.
ಇಸ್ರೇಲಿನ ಎಲ್ಬಿಟ್ ಸೆಕ್ಯೂರಿಟಿ ಸಿಸ್ಟಮ್ ಜೊತೆಗೆ ಜಂಟಿ ಸಹಭಾಗಿತ್ವ ಹೊಂದಿರುವ ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ಆಲ್ಫಾ ಡಿಸೈನ್ ನಿಂದ ಇದನ್ನು ಖರೀದಿ ಮಾಡಲಾಗುತ್ತದೆ.
ಈ ಡ್ರೋನ್ಗಳಲ್ಲಿ ಮದ್ದುಗುಂಡುಗಳನ್ನು ಸಾಗಿಸಬಹುದು ಮತ್ತು ದೂರದವರೆಗಿನ ಗುರಿಗಳನ್ನು ಇದು ಹೊಡೆಯಬಲ್ಲದು.
ಸೇನೆಯು ತುರ್ತು ಖರೀದಿ ಅಧಿಕಾರಗಳ ಅಡಿಯಲ್ಲಿ, ಸೆಪ್ಟೆಂಬರ್ 1 ರಂದು 100 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ತಂತ್ರಜ್ಞಾನ ಸಕ್ರಿಯಗೊಂಡ ಈ ಸ್ಕೈಸ್ಟ್ರೈಕರ್ ಕಾರ್ಯಕ್ಷಮತೆ, ಸಾಂದರ್ಭಿಕ ಅರಿವು ಹೊಂದಿದ್ದು, ಸೇನೆ ಮತ್ತು ವಿಶೇಷ ಪಡೆಗಳಿಗೆ ಹೆಚ್ಚಿನ ಸಾಮರ್ಥ್ಯಗಳನ್ನು ಒದಗಿಸುತ್ತದೆ.
ಸ್ಕೈಸ್ಟ್ರೈಕರ್ ಒಂದು ಮಾನವರಹಿತ ವಿಮಾನ ವ್ಯವಸ್ಥೆಯಾಗಿದ್ದು, ಇದು 6.5 ನಿಮಿಷಗಳಲ್ಲಿ 20 ಕಿಮೀ ಕ್ರಮಿಸಬಲ್ಲದು ಮತ್ತು ಗುರಿಯನ್ನು 550 ಕಿಮೀ ವೇಗದಲ್ಲಿ ಮುಟ್ಟಬಲ್ಲದು, ಶತ್ರುಗಳಿಗೆ ತಪ್ಪಿಸಿಕೊಳ್ಳಲು ಶೂನ್ಯ ಅವಕಾಶ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.