ನವದೆಹಲಿ: ಅತೀ ದೊಡ್ಡ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ದೇಶದಾದ್ಯಂತ ಸುಮಾರು 35 ನಗರಗಳಲ್ಲಿ ಎಂಟು ಸಾವಿರ ಜನರನ್ನು ನೇರ ನೇಮಕಾತಿ ಮೂಲಕ ಉದ್ಯೋಗಕ್ಕೆ ಆಯ್ಕೆ ಮಾಡುವುದಾಗಿ ಪ್ರಕಟಿಸಿದೆ.
ಬೆಂಗಳೂರು ನಗರವನ್ನೊಳಗೊಂಡಂತೆ ಈ ನೇಮಕಾತಿ ಮಾಡಲು ಸಂಸ್ಥೆ ನಿರ್ಧರಿಸಿದೆ. ಕಾರ್ಪೊರೇಟ್, ತಂತ್ರಜ್ಞಾನ, ಗ್ರಾಹಕ ಸೇವಾ ವಿಭಾಗಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ 8 ಸಾವಿರ ಜನರ ನೇಮಕಾತಿ ನಡೆಯಲಿದೆ ಎಂದು ಅದು ಹೇಳಿದೆ.
ಈ ಬಗ್ಗೆ ಸಂಸ್ಥೆಯ ಎಚ್ಆರ್ ದೀಪ್ತಿ ವರ್ಮಾ ಮಾತನಾಡಿದ್ದು, ಅಹಮದಾಬಾದ್, ಭೋಪಾಲ್, ಕೊಯಮತ್ತೂರ್, ಬೆಂಗಳೂರು, ಹೈದರಾಬಾದ್, ಚೆನ್ನೈ, ಗುರುಂಗಾವ್, ಮುಂಬೈ, ಕೋಲ್ಕತ್ತಾ, ನೋಯ್ಡಾ, ಅಮೃತಸರ, ಜೈಪುರ, ಕಾನ್ಪುರ, ಲೂಧಿಯಾನ ಮೊದಲಾದೆಡೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.
ನೇರ ಹಾಗೂ ಪರೋಕ್ಷವಾಗಿ ಅಮೆಜಾನ್ ಈಗಾಗಲೇ 10 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದು, 2025 ರ ವೇಳೆಗೆ ದೇಶದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿರುವುದಾಗಿಯೂ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.